ಬೆಂಗಳೂರು,ಫೆ 21(MSP): ರಾಜ್ಯ ಸರ್ಕಾರ, ಹದಿಮೂರು ಮಂದಿ ಐಎಎಸ್ ಸೇರಿ ಒಟ್ಟು 15 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಫೆ .20೦ ರ ಬುಧವಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿಯಲ್ಲಿ, ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಫೆ.14 ರ ಪ್ರೇಮಿಗಳ ದಿನದಂದೇ ವಿವಾಹವಾಗಿ ಸುದ್ದಿಯಾಗಿದ್ದ ಪ್ರಸ್ತುತ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಗಳಾದ ಡಾ.ಬಗಾದಿ ಗೌತಮ್ ಮತ್ತು ಎಸ್.ಅಶ್ವತಿ ಅವರೂ ಸೇರಿದ್ದಾರೆ.
ಇವರು ನವದಂಪತಿಗಳಾಗಿರುವ ಹಿನ್ನೆಲೆಯಲ್ಲಿ ಜೊತೆಯಲ್ಲಿಯೇ ಇರಲಿ ಎನ್ನುವ ಕಾರಣಕ್ಕೆ ಸರ್ಕಾರ ಇಬ್ಬರನ್ನು ಒಂದೇ ಜಿಲ್ಲೆಗೆ ವರ್ಗಾಯಿಸಿದೆ. ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಡಾ.ಬಗಾದಿ ಗೌತಮ್ ರನ್ನ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿಯನ್ನಾಗಿಯೂ, ದಾವಣಗೆರೆ ಪಂಚಾಯತ್ ಸಿಇಓ ಆಗಿದ್ದ ಎಸ್. ಅಶ್ವತಿ ಅವರನ್ನು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿದೆ.
ಅಶ್ವತಿ ಅವರ ತವರೂರಾದ ಕೇರಳದ ಕೋಯಿಕ್ಕೊಡ್ ನಲ್ಲಿ ಇವರಿಬ್ಬರು ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳ ವಿವಾಹ ಮಾಡಿಕೊಂಡಿದ್ದರು. ಬಳಿಕ ಫೆಬ್ರವರಿ 17 ಕ್ಕೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ರ ಊರಾದ ಆಂಧ್ರದ ವಿಶಾಖಪಟ್ಟಣದ ನಿವಾಸದಲ್ಲಿ ಆರತಕ್ಷತೆ ನಡೆದಿತ್ತು.
ಇವರಿಬ್ಬರಲ್ಲದೆ ಇತರ ವರ್ಗಾವಣೆಗೊಂಡ ಅಧಿಕಾರ ವಿವರ ಇಲ್ಲಿದೆ.
ಜಿ.ಎನ್. ಶಿವಮೂರ್ತಿ– ಜಿಲ್ಲಾಧಿಕಾರಿ, ದಾವಣಗೆರೆ,
ತುಷಾರ್ ಗಿರಿನಾಥ್– ಪ್ರಾದೇಶಿಕ ಆಯುಕ್ತ –ಬೆಳಗಾವಿ ವಿಭಾಗ, ಹೆಚ್ಚುವರಿಯಾಗಿ ಬೆಂಗಳೂರು ಜಲ ಪೂರೈಕೆ ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ,
ಎಸ್.ಬಿ. ಶೆಟ್ಟಣ್ಣವರ– ವ್ಯವಸ್ಥಾಪಕ ನಿರ್ದೇಶಕ, ಮೈಸೂರು ಪೇಪರ್ ಮಿಲ್ಸ್ ಲಿ.,
ಎಸ್.ಎಸ್. ನಕುಲ್– ನಿರ್ದೇಶಕ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ,
ಎಂ.ಕೆ. ಶ್ರೀರಂಗಯ್ಯ– ಆಯುಕ್ತರು, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ,
ಜಿ.ಆರ್.ಜೆ. ದಿವ್ಯಪ್ರಭು– ಆಯುಕ್ತರು, ಹಂಪಿ ವಿಶ್ವ ಪಾರಂಪರಿಕ ವ್ಯವಸ್ಥಾಪನಾ ಪ್ರಾಧಿಕಾರ,
ಎಚ್. ಬಸವರಾಜೇಂದ್ರ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಾವಣಗೆರೆ ಜಿಲ್ಲಾ ಪಂಚಾಯಿತಿ,
ಡಾ.ಕೆ. ಹರೀಶ್ ಕುಮಾರ್– ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ,
ಜಿ.ಸಿ. ವೃಷಭೇಂದ್ರ ಮೂರ್ತಿ– ನಿರ್ದೇಶಕರು, ಸಣ್ಣ , ಕಿರು ಮತ್ತು ಮಧ್ಯಮ ಉದ್ದಿಮೆಗಳು (ಎಂಎಸ್ಎಂಇ),
ವೈ.ಎಸ್. ಪಾಟೀಲ– ಜಿಲ್ಲಾಧಿಕಾರಿ, ವಿಜಯಪುರ,
ಡಾ.ಕೆ.ಎನ್. ವಿಜಯಪ್ರಕಾಶ್– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾಸನ, ಜಿಲ್ಲಾ ಪಂಚಾಯಿತಿ
ಸಿ. ಸತ್ಯಭಾಮಾ– ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಾಮರಾಜನಗರ, ಜಿಲ್ಲಾ ಪಂಚಾಯಿತಿ,
ಜಹೀರಾ ನಸೀಮ್ (ಕೆಎಎಸ್)– ವ್ಯವಸ್ಥಾಪಕ ನಿರ್ದೇಶಕರು, ಈಶಾನ್ಯ ಸಾರಿಗೆ ನಿಗಮ.