ನವದೆಹಲಿ, ಫೆ 21(SM): ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ ಪ್ರತಿಕಾರವಾಗಿ ಭಾರತ ಜಲಬಾಂಬ್ ಸಿಡಿಸಲು ಮುಂದಾಗಿದೆ.
ಪುಲ್ವಾಮಾ ದಾಳಿಗೆ ಸೇಡು ತೀರಿಸಿಕೊಳ್ಳಲು ಮುಂದಾಗಿರುವ ಭಾರತ ಸರಕಾರ ಪಾಕಿಸ್ತಾನವೇ ಬೆಚ್ಚಿಬೀಳುವಂಥ ಪ್ರಯೋಗ ಮಾಡಲು ನಿರ್ಧರಿಸಿದೆ. ನದಿ ನೀರು ಹರಿಯುವುದನ್ನು ಬಂದ್ ಮಾಡಲು ಭಾರತ ಮುಂದಾಗಿದೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ದೊಡ್ಡ ಬಾಂಬ್ ಸಿಡಿಸಿದ್ದಾರೆ.
ಭಾರತದಲ್ಲಿ ಹುಟ್ಟಿ ಪಾಕಿಸ್ತಾನದಲ್ಲಿ ಹರಿಯುವ ಪ್ರಮುಖ ಮೂರು ನದಿಗಳ ನೀರನ್ನು ಬಂದ್ ಮಾಡಿ, ಪಾಕಿಸ್ತಾನದಲ್ಲಿ ಹರಿದಂತೆ ಮಾಡಲು ಭಾರತ ಸರಕಾರ ಚಿಂತನೆ ನಡೆಸುತ್ತಿದೆ. ಪಾಕಿಸ್ತಾನಕ್ಕೆ ಹರಿಯುತ್ತಿರುವ ನದಿ ನೀರನ್ನು ಯಮುನಾ ನದಿಯತ್ತ ತಿರುಗಿಸಲು ಭಾರತದ ಜಲಸಂಪನ್ಮೂಲ ಇಲಾಖೆ ಯೋಜನೆ ಹಾಕಿದೆ ಎಂದು ಗಡ್ಕರಿ ಹೇಳಿದರು.
ಪಶ್ಚಿಮ ಭಾರತದ ಮೂರು ಪ್ರಮುಖ ನದಿಗಳಾದ ಇಂಡಸ್, ಝೀಲಂ ಮತ್ತು ಚೆನಾಬ್ ನದಿಗಳ ನೀರು ಪಾಕಿಸ್ತಾನಕ್ಕೂ ಹರಿಯುತ್ತಿದೆ. ಈ ನದಿ ನೀರಿನ ನೆರವಿನಿಂದ ಪಾಕಿಸ್ತಾನದ ಕುಡಿಯುವ ನೀರಿನ ದಾಹ ತಣಿಯುತ್ತಿದೆ. ಒಂದು ವೇಳೆ ಈ ನೀರು ಪೂರೈಕೆ ಸ್ಥಗಿತವಾದರೆ ಪಾಕಿಸ್ತಾನದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಲಿದೆ. ಹಾಗೂ ಸಿಂಧೂ ಜಲ ಒಪ್ಪಂದಕ್ಕೆ ಧಕ್ಕೆಯಾಗಲಿದೆ.