ಉತ್ತರ ಪ್ರದೇಶ, ಫೆ 22(MSP): ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಕುಖ್ಯಾತ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗೆ ಸೇರಿದ ಇಬ್ಬರು ಉಗ್ರಗಾಮಿಗಳನ್ನು ಉತ್ತರ ಪ್ರದೇಶದಲ್ಲಿ ಭಯೋತ್ಪಾದನ ನಿಗ್ರಹ ದಳ ಬಂಧಿಸಿದೆ. ಬಂಧಿತರಿಂದ ಎರಡು ಶಸ್ತ್ರಾಸ್ತ್ರ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಡಿಜಿಪಿ ಓಪಿ ಸಿಂಗ್ ತಿಳಿಸಿದ್ದಾರೆ. ಶಹನಾವಾಜ್ ಮತ್ತು ಅಕಿಬ್ ಎಂಬ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು ಉತ್ತರ ಪ್ರದೇಶ ಪೊಲೀಸರು ಮತ್ತು ಉಗ್ರ ನಿಗ್ರಹ ದಳ (ಎಟಿಎಸ್) ಜಂಟಿ ಕಾರ್ಯಾಚರಣೆ ನಡೆಸಿತ್ತು.
ಉತ್ತರ ಪ್ರದೇಶದ ಖಂಕಾಹ್ ಪೊಲೀಸ್ ಠಾಣೆಯ ಸಮೀಪದಲ್ಲಿರುವ ಖಾಸಗಿ ಹಾಸ್ಟೆಲ್ ನಲ್ಲಿ ತಂಗಿದ್ದ ಶಹನವಾಜ್ ಅಹ್ಮತ್ ತೆಲಿ ಹಾಗೂ ಅಕಿಬ್ ಎಂಬುವವರನ್ನು ಬಂಧಿಸಲಾಗಿದೆ. ಶಹನವಾಜ್ ಗ್ರೆನೇಡ್ ಎಕ್ಸ್ ಫರ್ಟ್ ತಿಳಿಬಂದಿದ್ದು, ಇಬ್ಬರೂ ಕಾಶ್ಮೀರ ಮೂಲದವರಾಗಿದ್ದು, ಇವರಲ್ಲಿ ಶಹನವಾಜ್ ಕುಲ್ಗಾಮ್ ನಿವಾಸಿಯಾಗಿದ್ದು, ಅಕಿಬ್ ಪುಲ್ವಾಮದ ನಿವಾಸಿಯಾಗಿದ್ದಾನೆ. ಉಗ್ರ ಸಂಘಟನೆಗಾಗಿ ಹಣವನ್ನು ಸಂಗ್ರಹಿಸಲೆಂದು ಇಬ್ಬರೂ ಉತ್ತರ ಪ್ರದೇಶಕ್ಕೆ ಬಂದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇವರಿಬ್ಬರನ್ನು ರಹಸ್ಯ ಪ್ರದೇಶದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.