ಮಂಗಳೂರು ಫೆ23(SB): ಮಂಗಳೂರು ಹಾಗೂ ಬೆಂಗಳೂರು ನಡುವೆ ಪ್ರಯಾಣಕ್ಕೆ ಹೊಸ ’ವಂದೇ ಮಾತರಂ’ ರೈಲು ಆರಂಭಿಸಲಾಗುವುದು ಎಂದು ರೈಲ್ವೇ ಸಚಿವ ಪಿಯುಷ್ ಗೋಯಲ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಗೃಹ ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ’ವಂದೇ ಮಾತರಂ’ ಸೆಮಿ ಹೈಸ್ಪೀಡ್ ವಿಭಾಗಕ್ಕೆ ಒಳಪಟ್ಟಿದ್ದು ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ತಯಾರಿಸಲ್ಪಟ್ಟದ್ದಾಗಿದೆ. ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸುವ ಈ ರೈಲು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿದೆ.
"ಮೊದಲ ಬಾರಿಗೆ ಮಂಗಳೂರು-ಬೆಂಗಳೂರು-ಚೆನ್ನೈ ಹಾಗೂ ಮಂಗಳೂರು- ಹೈದರಬಾದ್ ನಗರಗಳನ್ನು ಸಂಪರ್ಕಿಸುವ ವಂದೇ ಮಾತರಂ ರೈಲು ಪ್ರಯಾಣಿಕರಿಗೆ ಹೆಚ್ಚಿನ ಉಪಕಾರಿಯಾಗಲಿದೆ. ಈ ಹೊರತು ಮುಂದಿನ ಆರು ತಿಂಗಳುಗಳಲ್ಲಿ ದೇಶದ ಹೆಚ್ಚಿನ ರೈಲು ನಿಲ್ದಾನಗಳಲ್ಲಿ ವೈ ಫೈ ಸೌಲಭ್ಯ ನೀಡಲಾಗುವುದು" ಎಂದು ಅವರು ಹೇಳಿದರು