ಬೆಂಗಳೂರು,ಫೆ 24 (MSP): ಪ್ರಧಾನಿ ನರೇಂದ್ರ ಮೋದಿ ಅವರ ಅಕಾಶವಾಣಿಯಲ್ಲಿ ನಡೆಸಿಕೊಡುವ ಮನ್ ಕೀ ಬಾತ್ ಕಾರ್ಯಕ್ರಮವು ’ಸುಳ್ಳುಗಳನ್ನು ತುಂಬಿದ ಚೀಲ ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. ಈ ಬಗ್ಗೆ ಸರಣಿ ಟ್ವಿಟರ್ ನಲ್ಲಿ ಮಾಡಿರುವ ಅವರು, 55 ವರ್ಷದಲ್ಲಿ ಕಾಂಗ್ರೆಸ್ ಮಾಡದಿರುವ ಕೆಲಸಗಳನ್ನು ಮೋದಿ ಸರ್ಕಾರ 55 ತಿಂಗಳಲ್ಲಿ ಮಾಡಿರುವುದಾಗಿ ಹೇಳುತ್ತಾರೆ.ಕಾಂಗ್ರೆಸ್ ಆಡಳಿತದೊಂದಿಗೆ ಆದರೆ ಈ ಅವಧಿಯನ್ನು ಹೋಲಿಸಿದರೆ, ಸ್ವಾತಂತ್ರ್ಯ ಭಾರತ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಸಮಾಜ ಘಾತುಕ ಕೃತ್ಯ ಕೋಮು ಸಂಘರ್ಷ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಆ ಬಳಿಕ ಮತ್ತೊಂದು ಟ್ವೀಟ್ ಮಾಡಿದ ಅವರು, ನಾನು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ. ಆದರೆ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ ಭರವಸೆಯನ್ನು ಪೂರೈಸಿದ್ದಾರೆಯೇ? ಅಚ್ಚೇ ದಿನ್ ಏಲ್ಲಿ ? 2 ಕೋಟಿ ಉದ್ಯೋಗ ಭರವಸೆ, ಕಪ್ಪು ಹಣ ಏಲ್ಲಿ ? ಎಂದು ಪ್ರಶ್ನಿಸಿದ್ದಾರೆ.
ಭಾರತೀಯ ಜನತಾ ಪಕ್ಷಕ್ಕೆ ದೇಶದ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ. ಬಡವರ ಬಗ್ಗೆ ಕಾಳಜಿ ತೋರಿಲ್ಲ. 5 ವರ್ಷ ಆಡಳಿತ ಪೂರೈಸುತ್ತಿರುವ ಎನ್ ಡಿಎ ಸರ್ಕಾರ ಅಚ್ಚೆ ನುಡಿದಂತೆ ನಡೆದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.