ಇಸ್ಲಾಮಾಬಾದ್,ಫೆ 26(MSP): ಪುಲ್ವಾಮಾ ಉಗ್ರ ದಾಳಿಯ ಪ್ರತಿಕಾರವಾಗಿ ಭಾರತವೂ ಪಾಕ್ ಉಗ್ರ ನೆಲೆಗಳ ಮೇಲೆ ನಡೆಸಿದ ಏರ್ ಸ್ಟ್ರೈಕ್ ಪಾಕಿಸ್ತಾನದ ಜಂಘಾಬಲವೇ ಉಡುಗಿಹೋಗಿದೆ. ಆದರೆ ಪಾಕಿಸ್ತಾನ ಈ ವಿಚಾರವನ್ನು ಅತ್ತ ಒಪ್ಪಿಕೊಳ್ಳಲು ಆಗದೇ ತಳ್ಳಿ ಹಾಕಲು ಆಗದೇ ಪೇಚಿಗೆ ಸಿಲುಕಿದೆ.
ಭಾರತೀಯ ಸೇನೆ ಮಂಗಲವಾರ ಬೆಳಗ್ಗೆ 3.30ರ ಸುಮಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದೆ. ಆದರೆ ಭಾರತೀಯ ಸೇನೆ ಮೇಲೆ ಪಾಕ್ ಪ್ರತಿದಾಳಿ ಮಾಡಲು ಯತ್ನಿಸಿದ್ದು, ಆದರೆ ಈ ಪ್ರಯತ್ನ ವಿಫಲವಾಗಿದೆ.ಪಾಕಿಸ್ತಾನ ಎಫ್ -16 ಯುದ್ದ ವಿಮಾನಗಳ ಮೂಲಕ ಭಾರತೀಯ ವಾಯುಸೇನೆಯ ಮೇಲೆ ಪ್ರತಿದಾಳಿಗೆ ಮುಂದಾದಾಗ ಮಿರಾಜ್-2000 ಜೆಟ್ ತನ್ನ ಕೆಲಸವನ್ನು ಆಗಲೇ ಮುಗಿಸಿ ಭಾರತಕ್ಕೆ ಸುರಕ್ಷಿತವಾಗಿ ಹಿಂತಿರುಗಿ ಬಂದಿತ್ತು.
ಇದಲ್ಲದೆ ಕಛ್ ನಲ್ಲಿ ಪಾಕ್ ನ ಡ್ರೋಣ್ ನ್ನು ವಾಯುಸೇನೆ ನಾಶಗೊಳಿಸಿದೆ.