ಮಂಗಳೂರು,ಫೆ 26(MSP): ಪುಲ್ವಾಮಾದಲ್ಲಿ ಜೈಶ್ ಎ ಮಹಮ್ಮದ್ ಉಗ್ರ ಆತ್ಮಾಹುತಿ ದಾಳಿಗೆ ಭಾರತವೂ ಮಂಗಳವಾರ ಪಾಕ್ ಉಗ್ರರ ವಿರುದ್ಧ ಪ್ರತೀಕಾರ ಉತ್ತರ ನೀಡಿದೆ. ಮಂಗಳವಾರ ಮುಂಜಾನೆ ಭಾರತೀಯ ವಾಯುಪಡೆಯ ಮಿರಾಜ್-2000 ಜೆಟ್ ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರನ್ನು ಸರ್ವನಾಶಗೊಳಿಸಿದ್ದಾರೆ.
ಮಾತ್ರವಲ್ಲದೆ ಈ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ನ ಬಾಮೈದ ಯೂಸೂಫ್ ಅಜರ್ ಮಟಾಷ್ ಆಗಿದ್ದಾನೆ. ಇದಲ್ಲದೆ ದಾಳಿಯಲ್ಲಿ ಉಗ್ರರು ಮತ್ತು ಉಗ್ರ ಕಮಾಂಡರ್ ಗಳನ್ನು ಹತ್ಯೆ ಮಾಡಲಾಗಿದೆ. ಪಂಜಾಬ್ ನ ಭಟಿಂಡಾ ವಾಯುನೆಲೆಯಿಂದ ಯುದ್ದವಿಮಾನಗಳು ಟೇಕ್ ಆಫ್ ಆಗಿ , ನೇರವಾಗಿ ಎಲ್ ಒಸಿ ಬಾಲಾಕೋಟ್ ನಲ್ಲಿದ್ದ ಜೈಷ್ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿದೆ.
ಮುಂಜಾನೆ ಪಾಕಿಸ್ತಾನದ ಎಲ್ ಒಸಿಯೊಳಗೆ ಭಾರತೀಯ ಸೇನೆ ನುಗ್ಗಿ ಬರೋಬ್ಬರಿ ಒಂದು ಸಾವಿರ ಕೆಜಿ ತೂಕದ ಬಾಂಬ್ ದಾಳಿ ನಡೆಸಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಎಲ್ ಒಸಿ ಬಳಿ ಅಡಗಿದ್ದ 200-300 ಉಗ್ರರು ಬಲಿಯಾಗಿದ್ದಾರೆಂದು ತಿಳಿದು ಬಂದಿದೆ.