ಶೊರ್ನೂರ್ ಫೆ 26(MSP): ಚೆನ್ನೈನಿಂದ ಮಂಗಳೂರಿಗೆ ಬರುತ್ತಿದ್ದ ಸೂಪರ್ ಫಾಸ್ಟ್ ರೈಲು (12601) ಶೊರ್ನೂರ್ ರೈಲ್ವೇ ನಿಲ್ದಾಣದ ಬಳಿ ಹಳಿ ತಪ್ಪಿದ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಶಾತ್ ಘಟನೆಯಿಂದ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಲಿ, ಅಥವಾ ಸಾವು ನೋವಿನ ವರದಿಯಾಗಿಲ್ಲ.
ಬೆಳಗ್ಗೆ 6.5ಕ್ಕೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿರುವ ಶೋರನೂರು ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ರೈಲಿನ ಎರಡು ಬೋಗಿಗಳು ಹಳಿತಪ್ಪಿದೆ ಎಂದು ಮೂಲಗಳು ತಿಳಿಸಿವೆ. ರೈಲು ಹಳಿತಪ್ಪಿದ ಪರಿಣಾಮ ಶೊರ್ನೂರ್ ದಾರಿಯಾಗಿ ಸಾಗುವ ಎಲ್ಲ ರೈಲುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ರೈಲಿನ ಎಂಜಿನ್ ಹಿಂದಿರುವ ಪಾರ್ಸಲ್ ವ್ಯಾನ್ ಮತ್ತು ಎಸ್.ಎಲ್. ಆರ್. ಬೋಗಿಗಳು ಸಂಪೂರ್ಣವಾಗಿ ಹಳಿ ತಪ್ಪಿದ್ದು ರೈಲನ್ನು ಹಳಿಯಿಂದ ಮೇಲೆತ್ತುವ ಕಾರ್ಯ ಭರದಿಂದ ಸಾಗಿದೆ. ಹಳಿ ತಪ್ಪಿದ ಪರಿಣಾಮ ಹಳಿಯ ಅಕ್ಕಪಕ್ಕದಲ್ಲಿರುವ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.