ನವದೆಹಲಿ,ಫೆ 27 (MSP): ಇಡೀ ಸರ್ಜಿಕಲ್ ದಾಳಿ ಪ್ರಧಾನಿ ಮೋದಿ ಕಣ್ಗಾವಲಿನಲ್ಲೇ ನಡೆದಿದೆ. ಸೋಮವಾರ ರಾತ್ರಿ ಖಾಸಗಿ ಕಾರ್ಯಕ್ರಮ ಮುಗಿಸಿದ ಅವರು, ಅನಂತರ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡರು. ಕಾರ್ಯಾಚರಣೆ ವೇಳೆ ಪ್ರಧಾನಿ ಮೋದಿ ರಾತ್ರಿ ಇಡೀ ನಿದ್ದೆಗೆಟ್ಟು ಅಧಿಕಾರಿಗಳಿಂದ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ.
ಸಾಂದರ್ಭಿಕ ಚಿತ್ರ
ವಾಯುಸೇನೆಯ ಪಿಒಕೆ ಮೇಲಿನ ದಾಳಿ ಸಂದರ್ಭದಲ್ಲಿ ಪ್ರಧಾನಿ ಮೋದಿ ಮುಂಜಾನೆವರೆಗೂ ನಿದ್ರಿಸಿರಲಿಲ್ಲ. ಈ ವಿಚಾರವನ್ನು ಸರ್ಕಾರದ ಅಧಿಕೃತ ಮೂಲಗಳೇ ತಿಳಿಸಿದ್ದು, ಪ್ರಧಾನಿ ಮೋದಿ ರಾತ್ರಿ ಪೂರ್ತಿ ನಿದ್ದೆಗೆಟ್ಟು ಅಧಿಕಾರಿಗಳಿಂದ ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿದ್ದರು. ಇವರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಕೂಡ ಇವರಿಗೆ ಜೊತೆಯಾಗಿದ್ದರು ಎನ್ನಲಾಗಿದೆ.
ಪ್ರಧಾನಿ ಮೋದಿ ಅವರು ದೆಹಲಿಯ ದಕ್ಷಿಣ ಬ್ಲಾಕ್ ನಲ್ಲಿರುವ ರಾಷ್ಟ್ರಪತಿ ಭವನದ ಕೋಣೆಯಲ್ಲಿ ಕುಳಿತು ವಾಯುಪಡೆ ಸಂಪೂರ್ಣ ಕಾರ್ಯಾಚರಣೆ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿದ್ದರು. ಕಾರ್ಯಾಚರಣೆ ಯಶಸ್ವಿಯಾಗಿ ಭಾರತೀಯ ವಾಯುಸೇನಾ ಸಿಬ್ಬಂದಿಗಳೆಲ್ಲರೂ ಯಾವುದೇ ತೊಂದರೆ ಇಲ್ಲದೆ ಸುರಕ್ಷಿತವಾಗಿ ಭಾರತಕ್ಕೆ ಹಿಂತಿರುಗಿದ್ದಾರೆ ಎಂದ ಬಳಿಕವಷ್ಟೆ ಪ್ರಧಾನಿ ಮೋದಿ 4.30ರ ಸುಮಾರಿಗೆ ತಮ್ಮ ನಿವಾಸದ ತೆರಳಿದರು. ಅದಕ್ಕೂ ಮೊದಲು ಯುದ್ಧ ವಿಮಾನಗಳ ನೇತೃತ್ವ ವಹಿಸಿಕೊಂಡ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.