ನವದೆಹಲಿ,ಫೆ 27 (MSP): ಪುಲ್ವಾಮಾ ದಾಳಿ ಹಾಗೂ ಇದಕ್ಕೆ ಪ್ರತಿಕಾರವಾಗಿ ಉಗ್ರ ನೆಲೆಯ ನಾಶ ಈ ಎರಡು ಘಟನೆಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ಎದುರಾಗಿದೆ. ಇದಕ್ಕೆ ಪೂರಕ ಎಂಬಂತೆ ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಿಗ್ಗೆ ಪಾಕಿಸ್ತಾನ ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ, ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದೆ. ಐವರು ಭಾರತೀಯ ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಇದರೊಂದಿಗೆ ಪಾಕಿಸ್ತಾನ ಪಡೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿರುವ ಉರಿ ವಲಯದ ಮೇಲೆ ಬುಧವಾರ ಶೆಲ್ ದಾಳಿ ನಡೆಸಿದ ವರದಿಯಾಗಿದೆ. ಮಂಗಳವಾರ ಮುಂಜಾನೆ ಪಾಕಿಸ್ಥಾನದ ಭೂ ಪ್ರದೇಶಕ್ಕೆ ನುಗ್ಗಿದ ಭಾರತೀಯ ಸೇನೆ ಉಗ್ರರ ಮೂರು ಕೇಂದ್ರಗಳನ್ನು ದ್ವಂಸ ಮಾಡಿದ್ದು, ಈ ಘಟನೆಯಿಂದ ಬೆದರಿದಂತೆ ಕಂಡು ಬಂದ ಪಾಕಿಸ್ತಾನ ಸೇನೆ ಬುಧವಾರ ನಸುಕಿನ ಜಾವ ಭಾರತದ ಸೇನಾ ವಲಯಗಳ ಸಮೀಪ ಶೆಲ್ಗಳನ್ನು ತೂರಿ ತಮ್ಮ ಕುತಂತ್ರ ಬುದ್ದಿಯನ್ನು ತೋರಿದೆ ಎಂದುಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕ್ ಗೆ ಭಾರತವೂ ಪ್ರತಿದಾಳಿಯ ಮೂಲಕ ತ್ಯುತ್ತರ ನೀಡಿದ್ದು, ಯಾವುದೇ ಸಾವು ವರದಿಯಾಗಿಲ್ಲ.