ನವದೆಹಲಿ,ಫೆ 27 (MSP):ಭಾರತೀಯ ವಾಯುವಲಯ ದಾಟಿ ಪಾಕಿಸ್ತಾನ ಯುದ್ದ ವಿಮಾನಗಳು ಭಾರತವನ್ನು ಪ್ರವೇಶಿದ್ದು, ಅವುಗಳನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ವಾಯುಸೇನೆ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ವಾಯುಪಡೆ ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದ ಘಟನೆಯ ಬೆನ್ನಲ್ಲೇ ಈ ಘಟನೆ ನಡೆದಿದೆ. ಆದರೆ ಗಸ್ತು ತಿರುಗುತ್ತಿದ್ದ ಭಾರತೀಯ ಯುದ್ದ ವಿಮಾನಗಳಿಗೆ ಹೆದರಿದ ಪಾಕ್ ವಾಯುಸೇನೆ ಭಾರತೀಯ ವಾಯುವಲಯ ದಾಟಿ ವಾಪಾಸ್ ಹೋಗಿದೆ. ತನ್ನ ಗಡಿ ಪ್ರವೇಶಕ್ಕೂ ಮುನ್ನ ಭಾರತದ ಮೇಲೆ ಬಾಂಬ್ ಗಳನ್ನು ಎಸೆದಿದೆ. ಬುಧವಾರ ಬೆಳಗ್ಗೆ ನೌಶೆರಾ ಮತ್ತು ಪೂಂಛ್ ವಲಯ ದಲ್ಲಿ ಪಾಕಿಸ್ತಾನದ ವಿಮಾನಗಳು ಕಾಣಿಸಿಕೊಂಡಿದೆ
ಭಾರತ -ಪಾಕ್ ಯುದ್ಧದ ವಾತಾವರಣ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರತೆ ದೃಷ್ಟಿಯಿಂದ ಜಮ್ಮು-ಕಾಶ್ಮೀರದಲ್ಲಿ ಎಲ್ಲಾ ನಾಗರಿಕ ವಿಮಾನಗಳ ಹಾರಾಟ ರದ್ದುಗೊಳಿಸಿದೆ. ಮಾತ್ರವಲ್ಲದೆ ವಿಮಾನಗಳು ದೆಹಲಿಗೆ ವಾಪಸ್ ಆಗಿವೆ ಎಂದು ವರದಿ ವಿವರಿಸಿದೆ.