ನವದೆಹಲಿ,ಫೆ 28(MSP): ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಅವರಿಗೆ ತೊಂದರೆಯಾದರೆ ದಾಳಿ ನಡೆಸುತ್ತೇವೆ ಎಂದು ಪಾಕಿಸ್ತಾನಕ್ಕೆ ಭಾರತ ಖಡಕ್ ವಾರ್ನಿಂಗ್ ಬೆನ್ನಲ್ಲೇ , ಪಾಕ್ ಪ್ರಧಾನಿ ಇಮ್ರಾನ್ ಖಾನ್ ’ಶಾಂತಿಯ ಸಂಕೇತ ’ವಾಗಿ ಭಾರತೀಯ ವಾಯುಸೇನೆಯ ಪೈಲೆಟ್ ನ್ನು ಶುಕ್ರವಾರ ಬಿಡುಗಡೆಗೊಳಿಸಲಾಗುವುದು ಎಂದು ಗುರುವಾರ ಘೋಷಿಸಿದ್ದಾರೆ.
ಪಾಕ್ ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ ಪಾಕ್ ಪ್ರಧಾನಿ ಖಾನ್, ’ಶಾಂತಿಯ ಸಂಕೇತ ’ ವಾಗಿ ಭಾರತೀಯ ವಾಯುಸೇನೆಯ ಪೈಲೆಟ್ ನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದರು.
ಈ ಮಧ್ಯೆ ಭಾರತರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವೂ , ವಿಂಗ್ ಕಮಾಂಡರ್ ಅಭಿನಂದನ್ ಅವರಿಗೆ ಸಂಬಂಧಿಸಿದ 11 ವಿಡಿಯೋಗಳನ್ನು ಯೂಟ್ಯೂಬ್ ನಿಂದ ಅಳಿಸಿ ಹಾಕುವಂತೆ ಯೂಟ್ಯೂಬ್ ಸಂಸ್ಥೆಗೆ ಸೂಚನೆ ನೀಡಿದೆ.