ನವದೆಹಲಿ,ಮಾ 01 (MSP): ವಾಯುಗಡಿ ಉಲ್ಲಂಘಿಸಿದ ಪಾಕಿಸ್ತಾನ ಎಫ್ -16 ಯುದ್ದ ವಿಮಾನಗಳನ್ನು ಬೆನ್ನಟ್ಟಿ , ಶತ್ರು ದೇಶದಲ್ಲಿ ಬಂಧಿತರಾಗಿರುವ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ವಾಪಾಸ್ ಕರೆತರುವ ಯತ್ನದಲ್ಲಿ ಭಾರತಕ್ಕೆ ಬಹುದೊಡ್ಡ ಗೆಲುವು ಸಿಕ್ಕಿದ್ದು, ವಿಂಗ್ ಕಮಾಂಡರ್ ಅಭಿನಂದನ್ ’ ತಾಯ್ನಾಡಿಗೆ ಮರಳಲು ಕ್ಷಣಗಣನೆ ಆರಂಭವಾಗಿದೆ.
ಶುಕ್ರವಾರ ಭಾರತಕ್ಕೆ ಮರಳಲಿರುವ ಅಭಿನಂದನ್ ಸ್ವಾಗತಿಸಿಲು ಅಭಿನಂದನ್ ಅವರ ಪೋಷಕರು ವಾಘಾ ಬಾರ್ಡರ್ ಗೆ ಬಂದಿಳಿದಿದ್ದಾರೆ. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ತಂದೆ ನಿವೃತ್ತ ಏರ್ ಮಾರ್ಷಲ್ ಸಿಂಹಕುಟ್ಟಿ ವರ್ತಮಾನ್, ಮಗನನ್ನು ನೋಡಿದ ಬಳಿಕವಷ್ಟೇ ಮಾತನಾಡುತ್ತೇನೆ ಎಂದು ನುಡಿದಿದ್ದಾರೆ.ಇಂದು ಸಂಜೆ 4 ಗಂಟೆಯ ಸುಮಾರಿಗೆ ಅಭಿನಂದನ್ ವಾಯುಸೇನೆ ವಿಮಾನದ ಮೂಲಕ ದೆಹಲಿಗೆ ಆಗಮಿಸಲಿದ್ದಾರೆ. ಇಸ್ಲಾಮಾಬಾದ್ನಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಪ್ರಸ್ತುತ ಅಭಿನಂದನ್ ಅವರನ್ನು ಕರೆತರಲಾಗುತ್ತಿದೆ.
ಅಭಿನಂದನ್ ಸುರಕ್ಷಿತವಾಗಿ ವಾಪಾಸ್ ಬರಲೆಂದು ದೇಶದ್ಯಾಂತ ಒಕ್ಕೊರಲ ಬೇಡಿಕೆ ವ್ಯಕ್ತವಾಗಿತ್ತು. ’ಅಭಿನಂದನ್’ ಮತ್ತು ’ಬ್ರಿಂಗ್ ಬ್ಯಾಕ್ ಅಭಿನಂದನ್ ’ ಅಭಿಯಾನಗಳು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿತ್ತು. ಇದಲ್ಲದೆ ಪಾಕಿಸ್ತಾನವು ಅಭಿನಂದನ್ ಅವರನ್ನು ನಡೆಸಿಕೊಂಡ ರೀತಿಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇನ್ನೊಂದೆಡೆ ಅಭಿನಂದನ್ ಅವರಿಗೆ ಹಾನಿಯಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಕಠಿಣ ಸಂದೇಶವನ್ನು ಪಾಕ್ ಗೆ ಭಾರತ ರವಾನಿಸಿತ್ತು. ಮಾತ್ರವಲ್ಲದೆ ಪಾಕ್ ಅಭಿನಂದನ್ ಅವರ ವಿಚಾರ ಮುಂದಿಟ್ಟುಕೊಂಡು, ಭಾರತದ ಮೇಲೆ ಒತ್ತಡ ಹೇರುವ ಅಥವಾ ಸಂಧಾನಕ್ಕೆ ಬರುವ ಎಲ್ಲಾ ಕುತಂತ್ರಗಳನ್ನು ಭಾರತ ತಿರಸ್ಕರಿಸಿತ್ತು.
ಕೊನೆಗೆ ಯಾವುದೇ ಷರತ್ತುಗಳನ್ನು ಭಾರತದ ಕಾರ್ಯತಂತ್ರ, ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ ಅನಿವಾರ್ಯತೆಯಿಂದಲೇ ವಿಂಗ್ ಕಮಾಂಡರ್ ಅವರನ್ನು ಬಿಡುಗಡೆ ಮಾಡಲು ಒಪ್ಪಿತ್ತು.