ನವದೆಹಲಿ,ಮಾ 01 (MSP): ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ಗೂಢಚಾರನೊಬ್ಬನನ್ನು ಬಿಎಸ್ ಎಫ್ ಬಂಧನಕ್ಕೆ ಒಳಗಾಗಿದೆ. ಪಂಜಾಬ್ ಗಡಿಭಾಗದ ಮಾಬ್ಬೋ ಔಟ್ ಪೋಸ್ಟ್ ಬಳಿ ಪಿರೋಜ್ ಪುರ್ ನಲ್ಲಿ ಪಾಕಿಸ್ತಾನದ ಗೂಢಚಾರಿಯನ್ನು ಬಂಧಿಸಲಾಗಿದೆ.
ಗೂಢಚಾರಿ 21 ವರ್ಷದವನಾಗಿದ್ದು, ಪಾಕಿಸ್ತಾನ ಮೂಲದ ಮೊರದಾಬಾದ್ ದ ಮೊಹಮ್ಮದ್ ಶಾರುಖ್ ಎಂಬಾತನನ್ನು ಬಿಎಸ್ ಎಫ್ ಸೆರೆ ಹಿಡಿದಿದೆ.
ಮೊಹಮ್ಮದ್ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಬಿಎಸ್ ಎಫ್ ವಶಪಡಿಸಿಕೊಂಡಿದ್ದು, ಅದನ್ನು ಪರಿಶೀಲಿಸಿದಾಗ ಈತ ಪಾಕಿಸ್ತಾನ ಮೂಲದ ಆರು ಶಂಕಿತ ವಾಟ್ಸಪ್ ಗ್ರೂಪ್ ನ ಸದಸ್ಯನಾಗಿರುವುದು ಬೆಳಕಿಗೆ ಬಂದಿತ್ತು. ಸಂಶಯಾಸ್ಪದವಾಗಿ ಬೆಡ್ ಶೀಟ್ ಹೊದ್ದುಕೊಂಡು ಗಡಿಭಾಗದಲ್ಲಿರುವ ಔಟ್ ಪೋಸ್ಟ್ ಫೋಟೋಗಳನ್ನು ಕ್ಲಿಕ್ಕಿಸಿ ತೆಗೆಯಲು ಯತ್ನಿಸುತ್ತಿದ್ದ ಮೊಹಮ್ಮದ್ ನನ್ನು ಸೆರೆಹಿಡಿಯಲಾಗಿದೆ.