ಜಮ್ಮು ಕಾಶ್ಮೀರ, ಮಾ 01(SM): ಪಾಕಿಸ್ತಾನ ತನ್ನ ಹಳೆಯ ವರಸೆಯನ್ನೇ ಮುಂದುವರೆಸಿದ್ದು, ನಿರಂತರ ಕದನ ವಿರಾಮ ಉಲ್ಲಂಘಿಸುತ್ತಿದೆ. ಪಾಕ್ ಉಗ್ರರ ಪುಂಡಾಟಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.
ಜಮ್ಮು ಕಾಶ್ಮೀರದ ಹಂದ್ವಾರ್ ನಲ್ಲಿ ಭಾರತೀಯ ಸೇನೆ ಪಾಕ್ ನ ಇಬ್ಬರು ಉಗ್ರರರನ್ನು ಹೊಡೆದುರುಳಿಸಿದೆ. ಕಳೆದ 4 ದಿನಗಳಿಂದ 48 ಬಾರಿ ಪಾಕ್ ಕದನ ವಿರಾಮ ಉಲ್ಲಂಘಿಸಿದೆ. ಇಂದು ಸಂಜೆ ಕೂಡ ಪಾಕ್ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಸೇನೆ ಅದಕ್ಕೆ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ.
ಜಮ್ಮುವಿನ ಪೂಂಚ್ ಸೇರಿದಂತೆ ಕೆಲವೊಂದು ಪ್ರದೇಶಗಳಲ್ಲಿ ಪಾಕ್ ಉಗ್ರರು ದಾಳಿಯನ್ನು ನಡೆಸಿದ್ದಾರೆ. ಪಾಕಿಸ್ತಾನದ ಉಗ್ರರನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ನಮ್ಮ ಯೋಧರು ಸೂಕ್ತವಾದ ಪ್ರತ್ಯುತ್ತರವನ್ನೇ ನೀಡಿದ್ದಾರೆ. ಇದೀಗ ಇಬ್ಬರು ಉಗ್ರರನ್ನು ಎನ್ ಕೌಂಟರ್ ಮಾಡಿದ್ದು, ಉಳಿದ ಉಗ್ರರನ್ನು ಹೊಡೆದುರುಳಿಸಲು ಸೇನೆ ಕಾರ್ಯಾಚರಣೆ ಮುಂದುವರೆಸಿದೆ.