ನವದೆಹಲಿ,ಮಾ01(AZM):ಭಾರತದ ವೀರ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಮರಳಿ ತರುವಲ್ಲಿ ಭಾರತ ನಡೆಸಿದ ಶ್ರಮಕ್ಕೆ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಂದ ಶ್ಲಾಘನೆ ವ್ಯಕ್ತವಾಗಿದೆ.
ಪಾಕ್ ಸೇನೆಯಿಂದ ಬಂಧಿಸಲ್ಪಟ್ಟ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಲು ಭಾರತ ನೆರೆ ರಾಷ್ಟ್ರದ ಮೇಲೆ ತೀವ್ರ ಒತ್ತಡ ಹೇರಿದ್ದು, ಭಾರತದ ಸೈನಿಕನನ್ನು ಬಿಡುಗಡೆಗೊಳಿಸಿರುವುದಕ್ಕೆ ಸ್ಪೀಕರ್ ಮೆಚ್ಚುಗೆ ಸೂಚಿಸಿದರು.
ಇನ್ನು ಅಭಿನಂದನ್ ಬಿಡುಗಡೆಯ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿ ಪಾಕಿಸ್ತಾನ ದಯ ತೋರಿದೆ ಎಂದು ಹೇಳುವಂತಿಲ್ಲ. ಏಕೆಂದರೆ ಜಿನಿವಾ ಒಪ್ಪಂದದ ಪ್ರಕಾರ ಯುದ್ಧ ಖೈದಿಗಳನ್ನು ಬಿಡುಗಡೆಗೊಳಿಸಬೇಕು. 1971 ರ ನಂತರ ಭಾರತ, ಪಾಕಿಸ್ತಾನದ 90 ಸಾವಿರಕ್ಕೂ ಹೆಚ್ಚಿನ ಸೈನಿಕರನ್ನು ಬಿಡುಗೊಳಿಸಿರುವುದು ಮರೆಯಬಾರದು ಎಂದು ಹೇಳಿದ್ದಾರೆ.