ನವದೆಹಲಿ, ಮಾ 01(SM): 4 ಗಂಟೆಗಳ ಬಳಿಕ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಅಭಿನಂದನ್ ಅವರನ್ನು ವಾಘಾ ಗಡಿಯಲ್ಲಿ ಭಾರತದ ಸೇನೆಗೆ ಹಸ್ತಾಂತರಿಸಿದ್ದಾರೆ.
ಅಭಿನಂದನ್ ರನ್ನು ಸ್ವಾಗತಿಸಲು ಅವರ ಪೋಷಕರು ವಾಘ ಗಡಿಯಲ್ಲಿ ಕಾಯುತ್ತಿದ್ದರು. ಪಾಕ್ ಸೇನೆ ಅಭಿನಂದನ್ ಅವರನ್ನು ದೇಶಕ್ಕೆ ಹಸ್ತಾಂತರಿಸಿದ್ದಾರೆ. ಆ ಮೂಲಕ ಪಾಕ್ ನಾಟಕಕ್ಕೆ ತೆರೆ ಬಿದ್ದಿದೆ.
ಇನ್ನು ಸುಮಾರು 4 ಗಂಟೆಗಳ ಪಾಕಿಸ್ತಾನದ ವಿಳಂಬ ನೀತಿಗೆ ತೆರೆ ಬಿದ್ದಿದೆ. ಭಾರತದೊಳಗೆ ಅಭಿನಂದನ್ ಅವರು ತಂದು ಪಾಕ್ ಸೇನೆ ಹಸ್ತಾಂತರಿಸಿದೆ. ಆ ಮೂಲಕ ಭಾರತದ ಖಡಕ್ ನೀತಿಗೆ ಪಾಕ್ ಮಂಡಿಯೂರಿದೆ. ಪಾಪಿ ಪಾಕಿಸ್ತಾನ ಕೇವಲ ಎರಡೇ ದಿನದೊಳಗೆ ತನ್ನ ವಶದಲ್ಲಿದ್ದ ಕಮಾಂಡರ್ ಅವರನ್ನು ಬಿಡುಗಡೆ ಮಾಡುವ ಮೂಲಕ ತನ್ನ ದೌರ್ಬಲ್ಯವನ್ನು ಪ್ರದರ್ಶಿಸಿದೆ.
ಇನ್ನು ತಾಯ್ನಾಡಿಗೆ ಮರಳಿದ ಅಭಿನಂದನ್ ಗೆ ಇಡೀ ದೇಶಕ್ಕೆ ದೇಶವೇ ಮಂಡಿಯೂರಿದೆ. ಅಭಿನಂದನ್ ಪರ ಜೈಕಾರಗಳು ಮೊಳಗುತ್ತಿವೆ. ಇನ್ನು ಭಾರತಕ್ಕೆ ಮರಳಿದ ಅಭಿನಂದನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ಪರೇಕ್ಷೆಯ ಬಳಿಕ ಅಭಿನಂದನ್ ಅವರಿಂದ ಮಾಹಿತಿಗಳನ್ನು ಸಂಗ್ರಹಿಸುವ ಸಾಧ್ಯತೆ ಇದೆ.