ನವದೆಹಲಿ, ಮಾ 02(AZM):ತಾಯ್ನಾಡಿಗೆ ಮರಳಿ ಬಂದ ವೀರ ಯೋಧ ಇದೀಗ ಹಲವು ಪರೀಕ್ಷೆಗಳನ್ನು ಎದುರಿಸಬೇಕಾಗಿ ಬಂದಿದೆ. ನಿಯಮಾನುಸಾರ ಅವರು ಈ ಪರೀಕ್ಷೆಗಳನ್ನು ಎದುರಿಸಬೇಕಾಗಿದೆ.
ಮೊತ್ತ ಮೊದಲು ವೈದ್ಯಕೀಯ ಪರೀಕ್ಷೆ ಎದುರಿಸಬೇಕಾಗಿದ್ದು., ವಾಯುಪಡೆ ವಿಚಕ್ಷಣ ಘಟಕದಲ್ಲಿ ನಡೆಯಲಿದೆ. ಇನ್ನು ಶತ್ರು ರಾಷ್ಟ್ರದಲ್ಲಿ ಬಂಧನಕ್ಕೊಳಗಾಗಿದ್ದ ಅಭಿನಂದನ್ ಅವರಿಗೆ ಯಾವುದೇ ರೀತಿಯ ಹಿಂಸೆ ನೀಡಲಾಗಿದೆಯೇ ಅಥವಾ ವೈರಿಗೆ ನಮ್ಮ ದೇಶದ ಯಾವುದಾದರೂ ಗುಟ್ಟು ಬಿಟ್ಟು ಕೊಟ್ಟಿದ್ದಾರೆಯೇ ಎಂದು ತಿಳಿಯಲು ಮಾನಸಿಕ ಪರೀಕ್ಷೆ ಎದುರಿಸಬೇಕಿದೆ.
ಶತ್ರುರಾಷ್ಟ್ರದ ರಹಸ್ಯ ವಿಚಾರವೇನಾಗಿದ್ದರೂ ಗೊತ್ತಾಗಿದ್ದರೆ ತಿಳಿಸುವಂತೆ ವಾಯುಪಡೆಯಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹಾಗೂ ಹೆಚ್ಚಿನ ವಿಚಾರಣೆಗೆ ಗುಪ್ತಚರ ದಳದ ವಶಕ್ಕೂ ನೀಡವ ಸಾಧ್ಯತೆ ಕಂಡು ಬರಬಹುದು.