ಅಬುದಾಬಿ, ಮಾ.02(AZM)- ಅಲ್ -ಖೈದಾ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ನ ಸೌದಿ ಪೌರತ್ವ ರದ್ದುಗೊಂಡಿದೆ.
ಭಯೋತ್ಪಾದನೆಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ತೆಗೆದಿರುವ ಖಡಕ್ ನಿರ್ಧಾರ ಇದಾಗಿದೆ. ಅತ್ತ, ಅಮೇರಿಕಾ ಸರ್ಕಾರ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ತಲೆಗೆ1 ಮಿಲಿಯನ್ ಡಾಲರ್ ಬಹುಮಾನ ಘೋಷಣೆ ಮಾಡಿದ ಬೆನ್ನಲ್ಲೇ ಸೌದಿ ಸರಕಾರ ಈ ನಿರ್ಧಾರ ಕೈಗೊಂಡಿದೆ.
ಈ ಹಿಂದೆ, ಭರ್ಜರಿ ಸರ್ಜಿಕಲ್ ಸ್ಟೈಕ್ ಮೂಲಕ ಅಮೆರಿಕ ಕಾರ್ಯಾಚರಣೆ ನಡೆಸಿ, ಅಲ್ ಖೈದಾ ಉಗ್ರ ಒಸಾಮಾ ಬಿನ್ ಲಾಡೆನ್ನನ್ನು ಕೊಂದು ಹಾಕಿತ್ತು. ಇದೀಗ ಅವನ ಪುತ್ರ ಹಮ್ಜಾ ಬಿನ್ ಲಾಡೆನ್ ಮೇಲೂ ಅಮೆರಿಕ ಮುಗಿ ಬಿದ್ದಿದೆ. ಇದೀಗ ಅವನ ಪುತ್ರ ಹಮ್ಜಾ ಬಿನ್ ಲಾಡೆನ್ ಮೇಲೂ ಅಮೆರಿಕ ಮುಗಿ ಬಿದ್ದಿದೆ.
ಶತಾಯ ಗತಾಯ ಲಾಡೆನ್ ಸಂತತಿಯನ್ನು ನಿರ್ನಾಮಗೊಳಿಸುವತ್ತ ಮನಸ್ಸು ಮಾಡಿರುವ ಅಮೆರಿಕಾ, ಹಮ್ಜಾಬಿನ್ ಲಾಡೆನ್ನನ್ನು ಜೀವಂತವಾಗಿ ಹಿಡಿದುಕೊಟ್ಟವರಿಗೆ ೧೦ ಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.
ಹಮ್ಜಾ ಎಲ್ಲಿದ್ದಾನೆ ಎಂಬ ಬಗ್ಗೆ ಕೆಲ ವರ್ಷಗಳಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಆತ ಪಾಕಿಸ್ತಾನದಲ್ಲಿದ್ದಾನೆ ಎಂದು ಕೆಲ ವರದಿಗಳು ಹೇಳಿದರೆ, ಇನ್ನೂ ಕೆಲ ವರದಿಗಳು ಆಫ್ಘಾನಿಸ್ತಾನ, ಸಿರಿಯಾದಲ್ಲಿದ್ದಾನೆ ಎನ್ನುತ್ತವೆ. ಪ್ರಸ್ತುತ ಈತ ಸೌದಿಯಲ್ಲಿ ಅಡಗಿದ್ದಾನೆ ಎನ್ನಲಾಗುತ್ತಿದೆ.