ನವದೆಹಲಿ, ಮಾ 02(SM): ನಾನು ಚೆನ್ನಾಗಿದ್ದೇನೆ. ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳುತ್ತೇನೆ ಎಂದು ಪಾಕ್ ನಿಂದ ಬಿಡುಗಡೆಗೊಂಡು ನಿನ್ನೆ ರಾತ್ರಿ ಭಾರತಕ್ಕಾಗಮಿಸಿದ ವಿಂಗ್ ಕಮಾಂಡರ್ ಅಭಿನಂದನ್ ತಿಳಿಸಿದ್ದಾರೆ. ಕುಟುಂಬಸ್ಥರ ಜತೆ ಮಾತನಾಡಿದ ಅವರು, ಮತ್ತೆ ಕರ್ತವ್ಯಕ್ಕೆ ಹಾಜರಾಗುವ ಆಶಾ ಭಾವವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇನ್ನು ನಿನ್ನೆ ರಾತ್ರಿಯೇ ಅಭಿನಂದನ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದರು. ವಾಯು ಪಡೆಯ ಮುಖ್ಯಸ್ಥರು ಅವರನ್ನು ಕುಟುಂಬಸ್ಥರ ಭೇಟಿಗೆ ಕರೆದೊಯ್ದಿದ್ದರು. ಬಳಿಕ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ವೈದ್ಯರ ತಪಾಸಣೆ ಬಳಿಕ ಇದೀಗ ಕುಟುಂಬಸ್ಥರೊಂದಿಗೆ ಮಾತನಾಡಿದ್ದಾರೆ. ಹಾಗೂ ಮತ್ತೆ ಕರ್ತವ್ಯಕ್ಕೆ ಹಾಜರಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಆ ಮೂಲಕ ಭಾರತದ ಹುಲಿ ಅಭಿನಂದನ್ ವೈರಿಗಳನ್ನು ಮಟ್ಟ ಹಾಕಿಯೇ ಸಿದ್ಧ ಎಂಬ ಸಂದೇಶವನ್ನು ನೀಡಿದ್ದಾರೆ.