ಲಾಹೋರ್,ಮಾ02(AZM): ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಭಾರತಕ್ಕೆ ಮರಳಿದ ವೇಳೆ ಅವರ ಜೊತೆ ಇದ್ದ ಆ ಲೇಡಿ ಯಾರೂ ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು, ಅದಕ್ಕೆ ಉತ್ತರ ಇಲ್ಲಿದೆ.
ಅವರು ಬೇರೆ ಯಾರೂ ಅಲ್ಲ. ಬದಲಾಗಿ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಲ್ಲಿ ಭಾರತೀಯ ವ್ಯವಹಾರಗಳ ಇಲಾಖೆ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಫಾರಿಹಾ ಬುಗತಿ ಆಗಿದ್ದಾರೆ. ಫಾರಿಹಾ ಓರ್ವ FSP ಅಧಿಕಾರಿಯಾಗಿದ್ದಾರೆ, ಅವರು ಭಾರತದ IFS ಗ್ರೇಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಾಂಗ ಸಚಿವಾಲಯದಲ್ಲಿ ಭಾರತಕ್ಕೆ ಸಂಬಂಧಿಸಿದ ವ್ಯವಹಾರಗಳ ಉಸ್ತುವಾರಿಯಾಗಿದ್ದಾರೆ.
ಫಾರಿಹಾ ಬುಗತಿ ಪಾಕಿಸ್ತಾನ ಸೇನೆಯ ಜೈಲಿನಲ್ಲಿ ಬಂಧಿಯಾಗಿರುವ ಕುಲಭೂಷಣ್ ಜಾಧವ್ ಪ್ರಕರಣವನ್ನು ನಿರ್ವಹಿಸುತ್ತಿರುವ ಪಾಕಿಸ್ತಾನದ ಪ್ರಮುಖ ಅಧಿಕಾರಿಯೂ ಆಗಿದ್ದು, ಕಳೆದ ವರ್ಷ ಇಸ್ಲಮಾಬಾದ್ ನಲ್ಲಿ ಜಾಧವ್ ತನ್ನ ತಾಯಿ ಹಾಗೂ ಹೆಂಡತಿಯನ್ನು ಭೇಟಿಯಾದ ಸಂದರ್ಭದಲ್ಲಿ ಅಲ್ಲೇ ಇದ್ದರು.
ಇದೇ ರೀತಿ ನಿನ್ನೆ ಮಾ. 01ರಂದು ಭಾರತೀಯ ವಾಯುಸೇನೆಯ ಪೈಲಟ್ ಅಭಿನಂದನ್ ವಾಘಾ ಬಾರ್ಡರ್ ದಾಟುತ್ತಿದ್ದ ಸಂದರ್ಭದಲ್ಲೂ ಫಾರಿಹಾ ಬುಗತಿ ಉಪಸ್ಥಿತರಿದ್ದರು.