ಬೆಂಗಳೂರು,ಮಾ.03(AZM): ವೀರ ಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಫೈಟರ್ ಜೆಟ್ ಏರಲು ಸಮರ್ಥರಿದ್ದಾರೆ ಎಂಬ ದೈಹಿಕ ಸಾಮರ್ಥ್ಯ ಪರೀಕ್ಷೆಗಾಗಿ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.
![](https://daijiworld.ap-south-1.linodeobjects.com/iWeb/tvdaijiworld/img_tv247/azm_030319_abhinandan.jpg)
ದಿಲ್ಲಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಪರೀಕ್ಷೆ ಪೂರ್ಣವಾದ ನಂತರ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ. ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸುವ ಸಂದರ್ಭದಲ್ಲಿ ಉಂಟಾದ ಅಪಘಾತದಲ್ಲಿ ಅವರಿಗೆ ತೀವ್ರ ಪೆಟ್ಟಾಗಿದ್ದ ಹಿನ್ನಲೆ ಅಭಿನಂದನ್ ಅವರಿಗೆ ಮತ್ತೊಮ್ಮೆ ಫೈಟರ್ ಜೆಟ್ ಏರಲು ಕಷ್ಟ.
ಹಾಗಾಗಿ ಬೆಂಗಳೂರಿನ ಎಚ್ಎಎಲ್ನಲ್ಲಿನ ಇನ್ಸಿಟ್ಯೂಟ್ ಆಫ್ ಏರೋಸ್ಪೇಸ್ನಲ್ಲಿ ದೈಹಿಕ ಪರೀಕ್ಷೆಗೆ ಅವರು ಒಳಪಡಬೇಕಾಗಿದೆ.
ದೈಹಿಕ ಪರೀಕ್ಷೆಯ ಬಳಿಕ ನೀಡುವ ವರದಿಯಲ್ಲಿ ಎಲ್ಲವೂ ಸಕರಾತ್ಮಕ ಅಂಶಗಳು ಕಂಡು ಬಂದರೆ ಅಭಿನಂದನ್ ಯುದ್ಧವಿಮಾನ ಚಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗುತ್ತಿದೆ