ನವದೆಹಲಿ, ಮಾ 10(SM): ಲೋಕಸಭೆ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಈ ಬೆನ್ನಲ್ಲೇ ಎಲ್ಲಾ ರೀತಿಯ ಮುಂಜಾಗ್ರತ ಕ್ರಮಗಳನ್ನು ಆಯೋಗ ವಹಿಸಿಕೊಂಡಿದೆ. ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಗೊಂಡಿದೆ. ಇದರ ನಡುವೆಯೇ, ಸಾಮಾಜಿಕ ಜಾಲ ತಾಣಗಳ ಮೇಲೆ ಆಯೋಗ ನಿಗಾ ಇರಿಸಿದೆ.
ಪ್ರಸ್ತುತ ದಿನಗಳಲ್ಲಿ ಅತ್ಯಧಿಕ ಬಳಕೆಯಲ್ಲಿರುವ ಹಾಗೂ ಅತೀ ವೇಗವಾಗಿ ಸುದ್ದಿಗಳು ಪ್ರಚಾರಗೊಳ್ಳುವ ಸೋಷಿಯಲ್ ಮೀಡಿಯಾಗಳ ಮೇಲೆ ನಿಗಾ ಇರಿಸಲಾಗಿದೆ. ಸೋಷಿಯಲ್ ಮೀಡಿಯಾಗಳನ್ನು ಪ್ರಚಾರಕ್ಕೆ ಬಳಸಿ, ಅಪಪ್ರಚಾರ ನಡೆಸದಂತೆ ಎಚ್ಚರಿಕಾ ಕ್ರಮ ವಹಿಸಿಕೊಂಡಿದೆ.
ಚುನಾವಣೆ ಹಿನ್ನೆಲೆ ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಮನಬಂದತೆ ಟ್ವಿಟ್ ಮಾಡುವಂತಿಲ್ಲ. ವಾಟ್ಸಪ್ ಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ದಲ್ಲಿ ವಾಟ್ಸಪ್ ಅಡ್ಮಿನ್ ಗಳ ವಿರುದ್ಧ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಫೇಸ್ ಬುಕ್ ಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ದಲ್ಲಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಲು ತೀರ್ಮಾನಿಸಲಾಗಿದೆ. ಇನ್ನು ಇನ್ ಸ್ಟಾದಲ್ಲಿ ಅಭ್ಯರ್ಥಿ ಫೋಟೊ ಹಾಕುವಂತಿಲ್ಲ. ಈ ಎಲ್ಲಾ ನಿರ್ದೇಶನಗಳನ್ನು ಆಯೋಗ ನೀಡಿದ್ದು, ವಾಟ್ಸಪ್ ಫೇಸ್ ಬುಕ್ ಕಂಪನೆಗಳ ಮುಖ್ಯಸ್ಥರ ಜತೆ ಮಾತುಕತೆ ಕೂಡ ನಡೆಸಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರದಿಂದಿರಲು ಸೂಚನೆ ನೀಡಿದೆ.