ನವದೆಹಲಿ,ಮಾ.12(AZM):ಮುಸಲ್ಮಾನ ಬಾಂಧವರ ಪವಿತ್ರ ತಿಂಗಳಾದ ರಮ್ ಝಾನ್ ತಿಂಗಳಲ್ಲಿ ಲೋಕಸಭಾ ಚುನಾವಣೆಯು ನಡೆಸುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ವಿರೋಧಪಕ್ಷಗಳ ವಿವಾದಕ್ಕೆ, ಕೇಂದ್ರ ಕಾನೂನು ಸಚಿವರಾದ ರವಿ ಶಂಕರ್ ಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.
ಸೋಮವಾರ ನಡೆದ ಪತ್ರಿಕಾಗೋಷ್ಥಿಯಲ್ಲಿ ಈ ಕುರಿತು ಮಾತನಾಡಿದ ಅವರು,ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಯವರು ಸೇರಿದಂತೆ ವಿರೋಧಪಕ್ಷಗಳ ಕೆಲವು ನಾಯಕರು ರಮ್ ಝಾನ್ ತಿಂಗಳಲ್ಲಿ ಚುನಾವಣೆ ನಡೆಸುವುದರಿಂದ ಚುನಾವಣೆಗೆ ತೊಂದರೆಯಾಗುತ್ತದೆ ಎನ್ನುವ ಆಪಾದನೆಗಳನ್ನು ಹರಡಿಸುತ್ತಿದ್ದಾರೆ ನಾನು ವಿವಾದ ಎಬ್ಬಿಸಿರೋ ನಾಯಕರಿಗೆ ಒಂದು ವಿಚಾರವನ್ನು ನೆನಪಿಸಲು ಇಚ್ಛಿಸುತ್ತೇನೆ.
ಈ ಹಿಂದೆ ದೇಶದಲ್ಲಿ ಲೋಕಸಭಾ ಚುನಾವಣೆ ಹೋಳಿ ಮತ್ತು ಚೈತ್ ನವರಾತ್ರಿಯಂದು ನಡೆದಿತ್ತು. ಅದಲ್ಲದೇ ಕೈರಾನ ಸೇರಿ ದೇಶದ ವಿವಿಧ ಕ್ಷೇತ್ರಗಳಲ್ಲಿ ರಂಜಾನ್ ನಂದು ಉಪಚುನಾವಣೆ ಕೂಡಾ ನಡೆದಿತ್ತು.ಸುಖಾಸುಮ್ಮನೇ ಹತಾಶಯುಕ್ತ ಹೇಳಿಕೆಗಳನ್ನು ವಿರೋಧ ಪಕ್ಷದವರು ನೀಡಬೇಡಿ. ವಿರೋಧ ಪಕ್ಷದ ನಾಯಕರಿಗೆ ಸೋಲಿನ ಭೀತಿ ಎದುರಾಗಿದ್ದು, ಈ ರೀತಿಯ ಟೀಕೆಗಳು ಅವರ ಹತಾಶೆಯ ಸೂಚನೆಯಾಗಿದೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಮಜ್ಲಿಸ್-ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈ ಸಮಸ್ಯೆಯನ್ನು ಅನಗತ್ಯವಾಗಿ ಏರಿಸುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.