ಬೆಂಗಳೂರು, ಮಾ 12(SM): 2019ರ ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್ ಆದ್ ಬಳಿಕ ರಾಜಕೀಯ ಪಕ್ಷಗಳು ತಾಲೀಮು ಶುರು ಮಾಡಿಕೊಂಡಿವೆ. ಲೋಕ ಸಮರಕ್ಕೆ ಕರ್ನಾಟಕ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿದ್ದು, ಅಂತಿಮ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಗೆ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರವಾನಿಸಿದ್ದಾರೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೆಚ್ಚಿನ ಅಧಿಕಾರವನ್ನು ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನೀಡಿದ್ದಾರೆ. ಆದರೆ ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಈ ನಡುವೆ ಇತ್ತೀಚೆಗೆ ದೆಹಲಿಗೆ ತೆರಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಹೈಕಮಾಂಡ್ಗೆ ನೀಡಿದ್ದಾರೆ.
ಆದರೆ ಕೆಲವೊಂದು ಕ್ಷೇತ್ರಗಳಿಗೆ ಇಬ್ಬರಿಗಿಂತ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಎಚ್. ಎನ್ ಅನಂತ್ ಕುಮಾರ್ ಅವರ ನಿಧನದಿಂದ ತೆರವಾದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.
ಸಂಭಾವ್ಯ ಪಟ್ಟಿಯಲ್ಲಿರುವ ಪ್ರಮುಖರು:
ದಕ್ಷಿಣ ಕನ್ನಡ : ನಳಿನ್ ಕುಮಾರ್ ಕಟೀಲ್
ಉಡುಪಿ, ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ / ಡಿ.ಎನ್ ಜೀವರಾಜ್/ ಜಯಪ್ರಕಾಶ್ ಹೆಗ್ಡೆ
ಶಿವಮೊಗ್ಗ : ಬಿ.ವೈ. ರಾಘವೇಂದ್ರ
ಉತ್ತರ ಕನ್ನಡ : ಅನಂತ್ ಕುಮಾರ್ ಹೆಗಡೆ
ಚಾಮರಾಜನಗರ:ಎಂ.ಶಿವಣ್ಣ/ ವಿ ಶ್ರೀನಿವಾಸ ಪ್ರಸಾದ್
ಚಿತ್ರದುರ್ಗ : ಜನಾರ್ದನ ಸ್ವಾಮಿ / ಡಾ. ಲಕ್ಷ್ಮೀನಾರಾಯಣ್
ದಾವಣಗೆರೆ : ಜಿ.ಎಂ. ಸಿದ್ದೇಶ್ವರ
ಚಿಕ್ಕೋಡಿ : ರಮೇಶ್ ಕತ್ತಿ
ಧಾರವಾಡ : ಪ್ರಹ್ಲಾದ್ ಜೋಶಿ / ವಿಜಯ್ ಸಂಕೇಶ್ವರ
ಬೆಂಗಳೂರು ಉತ್ತರ - ಡಾ. ಎಚ್.ಎಂ ಚಂದ್ರಶೇಖರ್
ಕೊಪ್ಪಳ - ಸಿಂಗನಾಳ್ ವಿರೂಪಾಕ್ಷಪ್ಪ / ಸಿ.ವಿ. ಚಂದ್ರಶೇಖರ್
ತುಮಕೂರು- ಎಚ್.ಎನ್ ಚಂದ್ರಶೇಖರ್
ಬಾಗಲಕೋಟೆ - ಪಿ.ಸಿ ಪೂಜಾರ್/ ಸಂಗಮೇಶ ನಿರಾಣಿ
ಬಳ್ಳಾರಿ - ವೆಂಕಟೇಶ್ ಪ್ರಸಾದ್ (ನಾಗೇಂದ್ರ ಸೋದರ )
ಬೆಂಗಳೂರು ಕೇಂದ್ರ : ಪಿ.ಸಿ. ಮೋಹನ್
ಬೆಂಗಳೂರು ಉತ್ತರ : ಡಾ. ಎಚ್.ಎಂ ಚಂದ್ರಶೇಖರ್ / ಡಿ.ವಿ. ಸದಾನಂದಗೌಡ
ಬೆಂಗಳೂರು ಗ್ರಾಮಾಂತರ: ಸಿ.ಪಿ ಯೋಗೇಶ್ವರ್/ ಅಶ್ವಥ್ನಾರಾಯಣ್ ಗೌಡ / ತುಳಸಿ ಮುನಿರಾಜು ಗೌಡ/ ಎಂ.ಆರ್ ರುದ್ರೇಶ್
ಚಿಕ್ಕಬಳ್ಳಾಪುರ :ಬಿ.ಎನ್ ಬಚ್ಚೇಗೌಡ / ಶರತ್ ಬಚ್ಚೇಗೌಡ, ಕಟ್ಟಾ ಸುಬ್ರಮಣ್ಯ ನಾಯ್ಡು
ಕೋಲಾರ: ಡಿ.ಎಸ್ ವೀರಯ್ಯ/ ಚಿ.ನಾ ರೌ / ಚಲವಾದಿ ನಾರಾಯಣ ಸ್ವಾಮಿ
ಮೈಸೂರು- ಕೊಡಗು : ಪ್ರತಾಪ್ ಸಿಂಹ/ಡಾ. ಮಂಜುನಾಥ್/ ಡಿ ಮಾದೇಗೌಡ
ತುಮಕೂರು - ಎಚ್.ಎನ್ ಚಂದ್ರಶೇಖರ್ / ಸೊಗಡು ಶಿವಣ್ಣ / ಜಿ.ಎಸ್ ಬಸವರಾಜ್
ಚಾಮರಾಜನಗರ:ಎಂ.ಶಿವಣ್ಣ/ ವಿ ಶ್ರೀನಿವಾಸ ಪ್ರಸಾದ್