ಮಂಗಳೂರು,ಮಾ.12(AZM):ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತದ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಾವ ಚಿತ್ರವನ್ನು ಮಂಗಳೂರಿನ ಖಾಸಗೀ ಬಸ್ ವೊಂದರಲ್ಲಿ ಬಿಡಿಸಿ, ಭಾರತೀಯ ಸೈನ್ಯಕ್ಕೂ ಅಭಿನಂದನ್ ಅವರಿಗೂ ಗೌರವ ಸಲ್ಲಿದೆ.
ಪಾಕಿಸ್ತಾನದ ಎಫ್ -16 ಯುದ್ದ ವಿಮಾನವನ್ನು ಹೊಡೆದುರುಳಿಸುವ ವೇಳೆ ತಮ್ಮ ಮಿಗ್ 21 ವಿಮಾನಕ್ಕೆ ಹಾನಿಯುಂಟಾದ ಹಿನ್ನಲೆಯಲ್ಲಿ ಅಭಿನಂದನ್ ಅವರು ಪ್ರಾಣಾಪಾಯದಿಂದ ಪಾರಾಗಿ, ಪ್ಯಾರಾಚೂಟ್ ಸಹಾಯದಿಂದ ಕೆಳಗೆ ಹಾರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದು, ಬಂಧನಕ್ಕೆ ಒಳಗಾಗಿದ್ದರು. ಬಳಿಕ ಭಾರತದ ರಾಜತಾಂತ್ರಿಕ ಎಚ್ಚರಿಕೆಗೆ ಮಣಿದ ಪಾಕಿಸ್ತಾನ, ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿತ್ತು.
ಆದರೆ ಪಾಕ್ ಸೈನ್ಯದ ಕೈಯಲ್ಲಿ ಬಂಧನಕ್ಕೊಳಗಾದ ಸಂದರ್ಭದಲ್ಲಿ ಭಾರತದ ಸೇನಾ ರಹಸ್ಯಗಳನ್ನು ಅರಿಯಲು ಪಾಕ್ ಅಭಿನಂದನ್ ಅವರಿಗೆ ಮಾನಸಿಕ ಹಾಗೂ ದೈಹಿಕ ಚಿತ್ರ ಹಿಂಸೆಯನ್ನು ನೀಡಿತ್ತು. ಆ ಹಿಂಸೆಗಳನ್ನೆಲ್ಲಾ ಸಹಿಸಿದ ಅಭಿನಂದನ್ ಅವರು ಯಾವುದೇ ಒಂದು ರಹಸ್ಯವನ್ನು ಪಾಕ್ ಸೇನೆಯ ಮುಂದೆ ಬಿಚ್ಚಿಟ್ಟಿಲ್ಲ.
ಅಂತಹ ವೀರ ಯೋಧ ಅಭಿನಂದನ್ ಅವರಿಗೆ ಇಡೀ ಭಾರತವೇ ಗೌರವ ಸಲ್ಲಿಸುತ್ತಿದೆ. ಈ ಹಿನ್ನಲೆ ಮಂಗಳೂರಿನ ಖಾಸಗೀ ಸಿಟಿ ಬಸ್ಸೊಂದು ವಿಭಿನ್ನ ರೀತಿಯಲ್ಲಿ ಅಭಿನಂದನ್ ಅವರಿಗೆ ಗೌರವ ಸಲ್ಲಿಸಿದೆ.ಬಸ್ ಗೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಬಾವ ಚಿತ್ರ ಬಿಡಿಸಿ ಅದರಲ್ಲಿ ” We Salute Indian Army ” ಎಂದು ಬರೆಯುವ ಮೂಲಕ ಭಾರತೀಯ ಸೇನೆಗೆ ಗೌರವ ಸಲ್ಲಿಸಿದೆ.