ನವದೆಹಲಿ, ಮಾ 13(MSP): 2019 ರ ಲೋಕಸಭಾ ಚುನಾವಣೆಯನ್ನು ಯಶಸ್ವಿಗೊಳಿಸಲು, ಮತದಾನಕ್ಕಾಗಿ ಪ್ರೇರೇಪಿಸಿ ಮತದಾರರಿಗೆ ಜಾಗೃತಿಗೆ ಮೂಡಿಸುವಂತೆ, ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ನ ಖ್ಯಾತ ನಟ ನಟಿಯರಾದ ದೀಪಿಕಾ ಪಡುಕೋಣೆ, ಆಲಿಯಾ ಭಟ್, ರಣವೀರ್ ಸಿಂಗ್, ವರುಣ್ ಧವನ್, ಅನುಷ್ಕ ಶರ್ಮಮುಂತಾದವರನ್ನು ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ.
ಇವರಲ್ಲದೆ ಖ್ಯಾತ ಪತ್ರಕರ್ತರು, ಕ್ರೀಡಾಪಟು, ಹಾಗೂ ಈಶಾನ್ಯ ರಾಜ್ಯದ ಮುಖ್ಯಮಂತ್ರಿಗಳನ್ನು ಮತದಾರರಿಗೆ ಮತದಾನದ ಜಾಗೃತಿ ಮೂಡಿಸುವಂತೆ ವಿನಂತಿಸಿಕೊಂಡಿದ್ದಾರೆ.
ಟ್ವಿಟರ್ ನಲ್ಲಿ ಅಧಿಕ ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿರುವ ಕಾರಣ ಮತ್ತು ಅತಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕಾರಣ ಕಾರಣ, ಪ್ರದಾನಿ ತಮ್ಮ ಟ್ವೀಟ್ ನಲ್ಲಿ "ಮತದಾರರ ಜಾಗೃತಿಗೆ ನಿಮ್ಮ ಬೆಂಬಲವು ಮೌಲ್ಯಯುತವಾಗಿದೆ ಮತ್ತು ನೀವು ಮತದಾನದ ಬಗ್ಗೆ ಮಾಡುವ ಜಾಗೃತಿ 130 ಕೋಟಿ ಭಾರತೀಯರಿಗೆ ಪ್ರಯೋಜನಕಾರಿಯಾಗಲಿದೆ. ಇದು 2019 ರ ಲೋಕಸಭಾ ಚುನಾವಣೆಯನ್ನು ಯಶಸ್ವಿಗೊಳಿಸಲು ಸಹಾಯಕಾರಿಯಾಗುತ್ತದೆ " ಎಂದು ಕೋರಿದ್ದಾರೆ