ನವದೆಹಲಿ,ಮಾ13(AZM):ಈಗಿನ ಆಧುನಿಕ ಕಾಲದಲ್ಲಿ ಜನರಿಗೆ ಎಲ್ಲಾ ವಿಷಯಗಳಲ್ಲೂ ಸಾಕಷ್ಟು ಅನುಕೂಲಗಳಿದ್ದು, ಈ ಅನುಕೂಲಗಳೇ ಅಪಾಯವಾಗಿ ಪರಿಣಮಿಸುವ ಸಾಧ್ಯತೆಗಳು ಇವೆ. ಅವುಗಳಲ್ಲಿ ಮುಖ್ಯವಾದುದು ಬ್ಯಾಂಕ್ ವ್ಯವಹಾರ. ಈಗಿನ ಸ್ಮಾರ್ಟ್ ಫೋನ್ ಯುಗದಲ್ಲಿ ಗ್ರಾಹಕರಿಗೆ ಮನೆಯಲ್ಲೇ ಕುಳಿತು ಬ್ಯಾಂಕ್ ನ ಎಲ್ಲಾ ವ್ಯವಹಾರಗಳನ್ನು ಮಾಡಬಹುದಾಗಿದೆ. ಆದರೆ ಸ್ವಲ್ಪ ಯಾಮಾರಿದರೂ ನಿಮ್ಮ ಎಕೌಂಟ್ ಖಾಲಿಯಾಗುವುದು ಖಂಡಿತ.
ಈ ವಂಚನೆ ಅಡಗಿರುವುದು, ಪ್ರಮುಖ ಮೆಸೆಂಜಿಗ್ ಆಪ್ ಆಗಿರುವ ವಾಟ್ಸಾಪ್ ನಲ್ಲಿ. ವಾಟ್ಸಪ್ ಮೂಲಕ ಬ್ಯಾಂಕ್ ಖಾತೆ ಮಾಹಿತಿ ಕೇಳಿ ಹಣ ದೋಚುವ ಪ್ರಯತ್ನಗಳು ನಡೆದಿರುವುದು ಇದೀಗ ಬೆಳಕಿಗೆ ಬಂದಿದ್ದು, ಈ ಬಗ್ಗೆ ಗ್ರಾಹಕರು ಜಾಗೃತರಾಗಿರಬೇಕು ಎಂದು ಎಸ್ಬಿಐ ತಿಳಿಸಿದೆ. ವಾಟ್ಸಪ್ನಲ್ಲಿ ಬ್ಯಾಂಕ್ ಖಾತೆಯ ಮಾಹಿತಿ ಕೇಳಿ ಯಾವುದಾರೂ ಮೆಸೇಜ್ ಬಂದರೆ ಅಂಥ ಯಾವುದೇ ಅನುಮಾನಾಸ್ಪದ ಮೆಸೇಜ್ ಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ಬ್ಯಾಂಕ್ ಗ್ರಾಹಕರಿಗೆ ತಿಳಿಸಿದೆ.
ಖದೀಮರು ಒಟಿಪಿ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿ ಅವರ ವಿಶ್ವಾಸ ಗೆಲ್ಲುತ್ತಾರೆ. ಇದರಿಂದ ಗ್ರಾಹಕರು ನಿಜವಾದ ಒಟಿಪಿ ಯನ್ನು ಹಂಚಿಕೊಳ್ಳಲು ಮುಂದಾಗುತ್ತಾರೆ ಇದು ಒಂದು ಪ್ರಯತ್ನವಾದರೇ, ಗ್ರಾಹಕರ ವಾಟ್ಸಪ್ಗೆ ಲಿಂಕ್ ಒಂದನ್ನು ಕಳುಹಿಸಿ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಲು ತಿಳಿಸುತ್ತಾರೆ. ಅದು ದುರುದ್ದೇಶದ ಆಪ್ ಆಗಿದ್ದು, ಒಟಿಪಿ ಮಾಹಿತಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ.
ಬ್ಯಾಂಕ್ ಸಿಬ್ಬಂದಿ ಎಂದು ಕರೆಮಾಡಿ ನಿಮ್ಮ ಡೇಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಹೊಸ ಕಾರ್ಡಿಗೆ ಅಪ್ಗ್ರೇಡ್ ಮಾಡಿಕೊಳ್ಳಬೇಕು ಎಂದು ಹೇಳಿ ಅವರು ಡೇಬಿಟ್ ಅಥವಾ ಕ್ರೆಡಿಟ್ ಕಾರ್ಡಿನ ನಂಬರ್, ಸಿವಿವಿ ನಂಬರ್, ಕಾರ್ಡ್ ಮಾನ್ಯತೆಯ ಕಡೆ ದಿನಾಂಕದ ಮಾಹಿತಿಯನ್ನು ಕೇಳಿ ಪಡೆಯುತ್ತಾರೆ. ನಂತರದಲ್ಲಿ ಎಸ್ ಎಮ್ ಎಸ್ ಅಥವಾ ವಾಟ್ಸಪ್ನಲ್ಲಿ ಕನ್ಫರ್ಮ್ಮೇಶನ್ ಮೆಸ್ಸೆಜ್ ಬರುತ್ತದೆ ಎಂದು ಹೇಳುತ್ತಾರೆ.
ವಾಟ್ಸಪ್ ಅಥವಾ ಎಸ್ ಎಮ್ ಎಸ್ ಮೂಲಕ ಗ್ರಾಹಕರ ಫೋನಿಗೆ ಬರುವ ಆ ಕನ್ಫರ್ಮ್ಮೇಶನ್ ಮೆಸ್ಸೆಜ್ ದುರದ್ದೇಶದ ಲಿಂಕ್ ಹೊಂದಿದ್ದು, ದೃಢಿಕರಣಕ್ಕಾಗಿ ಗ್ರಾಹಕರು ಆ ಲಿಂಕ್ ಅನ್ನು ಒತ್ತುತ್ತಾರೆ. ಆ ನಂತರದಲ್ಲಿ ಗ್ರಾಹಕರಿಗೆ ಬರುವ ಒಟಿಪಿಗಳು ಖದೀಮರು ಫೋನಿಗೆ ರವಾನೆಯಾಗುತ್ತವೆ.
ಗ್ರಾಹಕರು ಯಾವ ರೀತಿ ಎಚ್ಚರವಹಿಸಬೇಕು?
ಬ್ಯಾಂಕ್ ಸಿಬ್ಬಂದಿಗಳು ಯಾವತ್ತೂ ಕರೆ ಮಾಡಿ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ಕೇಳುವುದಿಲ್ಲ. ಹಾಗಾಗಿ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ಕೇಳುವ ಮೆಸ್ಸೆಜ್ಗಳು ಬಂದರೇ ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡಬೇಕು. . ಒಂದು ವೇಳೆ ನೀವು ಒಟಿಪಿ ನೀಡಿ ಮೋಸಕ್ಕೆ ಒಳಗಾಗಿದ್ದರೇ 1-800-111109 ಈ ನಂಬರ್ಗೆ ಕರೆ ಮಾಡಿ ದೂರು ನೀಡಿ. ಅಥವಾ "Problem" ಎಂದು ಟೈಪ್ ಮಾಡಿ 9212500888 ನಂಬರ್ಗೆ ಎಸ್ ಎಮ್ ಎಸ್ ಮಾಡಬಹುದು ಅಥವಾ Twitter @SBICard_Connect ದೂರು ನೀಡಬಹುದು. ಎಂದು ಬ್ಯಾಂಕ್ ಮಾಹಿತಿ ನೀಡಿದೆ.