ವಾಷಿಂಗ್ಟನ್, ಮಾ.14(AZM)- ಉಗ್ರವಾದದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಕ್ ಗೆ ವಿವಿಧ ದೇಶಗಳು ಒತ್ತಡ ಹೇರುತ್ತಿರುವ ಬೆನ್ನಲೇ ಭಾರತ ಹಾಗೂ ಅಮೆರಿಕಾ ಪಾಕಿಸ್ತಾನಕ್ಕೆ ಈ ಕುರಿತು ತಾಕೀತು ಮಾಡಿದೆ.
ಈ ಸಂಬಂಧ ವಾಷಿಂಗ್ಟನ್ನಲ್ಲಿ ಅಮೆರಿಕಾದ ಭದ್ರತಾ ಸಲಹೆಗಾರರ ಜಾನ್ ಬೋಲ್ಟನ್ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲ್ ಬುಧವಾರ ರಾತ್ರಿ ಚರ್ಚೆ ನಡೆಸಿದ್ದಾರೆ. ಅಲ್ಲದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಜತೆ ಉಗ್ರರ ವಿರುದ್ದ ಹೋರಾಟದ ಯೋಜನೆಗಳ ಮತ್ತು ಅಮೆರಿಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಗಿದೆ.
ಉಗ್ರರನ್ನೇ ಸಂಹಾರ ಮಾಡಲು ಭಾರತಕ್ಕೆ ನಮ್ಮ ಬೆಂಬಲವಿರುತ್ತದೆ ಎಂದು ಅಮೆರಿಕಾದ ಭದ್ರತಾ ಸಲಹೆಗಾಗರ ಜಾನ್ ಬೋಲ್ಟನ್ ಟ್ವೀಟ್ ಮಾಡುವ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.