ಗುಜರಾತ್,ಮಾ 16 (MSP): ಬಿಜೆಪಿ ಪಕ್ಷವು, ಕೇವಲ ತನ್ನ ತಪ್ಪು ನೀತಿಗಳನ್ನು ಮತ್ತು ಯೋಜನೆಗಳನ್ನು ಉತ್ತೇಜಿಸಲು ಸೇಲ್ಸ್ ಮೆನ್ ಗಳನ್ನು ನೇಮಿಸಿಕೊಂಡಿರುವ ಮೂಲಕ ಸಾರ್ವಜನಿಕರನ್ನು ಮೋಸಗೊಳಿಸುವ ಒಂದು ಮಾರ್ಕೆಟಿಂಗ್ ಕಂಪೆನಿಯೇ ಹೊರತು ಬೇರೇನೂ ಅಲ್ಲ ಪಟೇಲ್ ಆಂದೋಲನದ ನಾಯಕಿ ರೇಶ್ಮಾ ಪಟೇಲ್ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷವನ್ನು ತೊರೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ರೇಶ್ಮಾ ಪಟೇಲ್, ಬಿಜೆಪಿ ಕೇವಲ ಒಂದು ಮಾರ್ಕೆಟಿಂಗ್ ಕಂಪೆನಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಗುಜರಾತ್ನಲ್ಲಿ ಪಟೇಲ್ ಆಂದೋಲದ ಮಹಿಳಾ ನಾಯಕಿಯಾಗಿ ಕಾಣಿಸಿಕೊಂಡಿದ್ದ ರೇಶ್ಮಾ ಪಟೇಲ್ ಅವರು ಕೆಲ ಸಮಯದ ಹಿಂದೆಯಷ್ಟೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು ಸೇರಿದ್ದರು. ಆದರೆ ಭಾರತೀಯ ಜನತಾ ಪಕ್ಷವೂ ಕೇವಲ ಪೊಳ್ಳು ಭರವಸೆ ನೀಡುವ ಪಕ್ಷವಾಗಿ ನನಗೆ ಭ್ರಮನಿರಸನ ಉಂಟಾಗಿರುವುದರಿಂದು ನಾನು ಪಕ್ಷವನ್ನು ತೊರೆಯುತ್ತಿದ್ದೇನೆ ಎಂದು ರೇಶ್ಮಾ ಹೇಳಿದ್ದಾರೆ. ಹಾರ್ದಿಕ್ ಪಟೇಲ್ ನೇತೃತ್ವದ ಪ್ರಮುಖ ಸದಸ್ಯೆಯಾಗಿರುವ ರೇಶ್ಮಾ ಪಟೇಲ್ ತಮ್ಮ ರಾಜೀನಾಮೆ ಪತ್ರವನ್ನು ಗುಜರಾತ್ ನ ಬಿಜೆಪಿ ಅಧ್ಯಕ್ಷ ಜಿತು ವಘಾನಿ ಅವರಿಗೆ ಸಲ್ಲಿಸಿ ಪಕ್ಷ್ ತೊರೆದಿದ್ದಾರೆ. ಈ ನಡುವೆ ಅವರು ಪೋರಬಂದರ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.