ಬೆಂಗಳೂರು,ಮಾ.16(AZM):ಮಾಧ್ಯಮಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದೆ ವರದಿ ಮಾಡಬೇಕು. ಹಾಗೂ ಸುಳ್ಳು ಸುದ್ದಿ ಮತ್ತು ಪಾವತಿ ಸುದ್ದಿಯ ಕುರಿತು ಎಚ್ಚರವಹಿಸಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಈ ಕುರಿತು ಅವರು ಮಾತನಾಡಿದರು. ವಿದ್ಯುನ್ಮಾನ ಮಾಧ್ಯಮಗಳು ರಾಜಕೀಯ ಪಕ್ಷಗಳ ಜಾಹೀರಾತು ಬಿತ್ತರಿಸುವ ಮುನ್ನಾ ಚುನಾವಣಾ ಆಯೋಗದ ಅನುಮತಿ ಪತ್ರ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇದೇ ಸಂಧರ್ಭದಲ್ಲಿ ಅವರು ತಿಳಿಸಿದರು.