ನವದೆಹಲಿ,ಮಾ.17(AZM):ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಸಿ. ಘೋಷ್ ಅವರು ದೇಶದ ಮೊದಲ ಲೋಕಪಾಲ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಪ್ರಧಾನಮಂತ್ರಿ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್ ಹಾಗೂ ಪ್ರತಿಷ್ಠಿತ ಜ್ಯುರಿಗಳಿದ್ದ ಆಯ್ಕೆ ಸಮಿತಿಯು ಶುಕ್ರವಾರದಂದು ನಡೆದ ಸಭೆಯಲ್ಲಿ ನ್ಯಾ. ಪಿ.ಸಿ.ಘೋಷ್ ಅವರನ್ನು ದೇಶದ ಮೊದಲ ಲೋಕಪಾಲ್ ಆಗಿ ಆಯ್ಕೆ ಮಾಡಿದೆ. ಈ ಕುರಿತು ಶೀಘ್ರದಲ್ಲಿ ಅಧಿಕೃತ ಘೋಷಣೆ ಹೊರಬೀಳಲಿದ್ದು, ಮುಂದಿನ ವಾರ ನ್ಯಾ.ಘೋಷ್ ಅವರು ದೇಶದ ಮೊದಲ ಲೋಕಪಾಲ್ ಆಗಿ ನೇಮಕವಾಗುವ ಸಾಧ್ಯತೆ ಇದೆ.ನ್ಯಾ.ಘೋಷ್ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸ್ಥಾನದಿಂದ ಮೇ 2017ರಂದು ನಿವೃತ್ತರಾಗಿದ್ದರು.
ಹಾಲಿ ಪ್ರಧಾನಿ, ಮಾಜಿ ಪ್ರಧಾನಿ, ಕೇಂದ್ರ ಸಚಿವರು, ಲೋಕಸಭಾ ಸದಸ್ಯರು, ಸಾರ್ವಜನಿಕ ವಲಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಾನೂನು ಅಡಿಯಲ್ಲಿ ದೂರು ದಾಖಲಾದರೆ ಅವರನ್ನು ತನಿಖೆ ಮಾಡಬಹುದಾದ ಅಧಿಕಾರ ಲೋಕಪಾಲ್ ಅವರಿಗೆ ಇದೆ. ಮತ್ತು ವರ್ಷಕ್ಕೆ 10 ಲಕ್ಷಕ್ಕಿಂತ ಹೆಚ್ಚಿನ ವಿದೇಶಿ ಧನಸಹಾಯ ಪಡೆದುಕೊಳ್ಳುತ್ತಿರುವ ಎನ್ಜಿಒಗಳನ್ನು ತನಿಖೆ ನಡೆಸಬಹುದಾಗಿದೆ. ಲೋಕಪಾಲ್ ಅಧಿಕಾರಾವಧಿ 4 ವರ್ಷವಾಗಿದೆ.