ನವದೆಹಲಿ, ಮಾ 18 (MSP): ಲೋಕಸಭಾ ಚುನಾವಣೆಯ ಪ್ರಥಮ ಹಂತಕ್ಕೆ ಸೋಮವಾರ ಅಧಿಸೂಚನೆ ಹೊರಡಿಸಲಾಗುವುದು. ಈ ಹಂತದಲ್ಲಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 91 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ರಾಷ್ಟ್ರ ಮಟ್ಟದಲ್ಲಿ ಎರಡನೇ ಹಂತದಲ್ಲಿ, ಅಂದರೆ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ನಡೆಯಲಿರುವ 14 ಲೋಕಸಭೆ ಕ್ಷೇತ್ರಗಳ ಚುನಾವಣೆಗಾಗಿ ಮಾ.19 ರ ಮಂಗಳವಾರಂದು ಅಧಿಸೂಚನೆ ಹೊರಬೀಳಲಿದೆ. ಹೀಗಾಗಿ ನಾಳೆಯಿಂದಲೇ ಕರ್ನಾಟಕದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಬಹುದಾಗಿದೆ. ನಾಮಪತ್ರ ಸಲ್ಲಿಕೆಗೆ ಮಾ.26 ಕೊನೆ ದಿನವಾಗಿದ್ದು, 27 ರಂದು ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ವಾಪಾಸು ಪಡೆಯಲು ಮಾ.29 ಕೊನೆ ದಿನವಾಗಿದೆ. ಏ.18 ರಂದು ಮತದಾನ ನಡೆಯಲಿದೆ.
ಇನ್ನು ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶದ 2 ಕ್ಷೇತ್ರಗಳು, ಅಸ್ಸಾಂ 5, ಬಿಹಾರ್ 4, ಛತ್ತೀಸ್ಘಡ 1, ಜಮ್ಮು ಮತ್ತು ಕಾಶ್ಮೀರ 2 ಮಹಾರಾಷ್ಟ್ರದ 7, ಮಣಿಪುರ 1, ಮೇಘಾಲಯ 2, ಮಿಝೋರಾಂ 1, ನಾಗಾಲ್ಯಾಂಡ್ 1, ಒಡಿಶಾ 4, ಸಿಕ್ಕಿಂ 1, ತ್ರಿಪುರಾ1, ಉತ್ತರ ಪ್ರದೇಶ 8, ಉತ್ತರಾಖಂಡ 5 , ಪಶ್ಚಿಮ ಬಂಗಾಳ 2 ರಾಜ್ಯದಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ೧ ಹಾಗೂ ಲಕ್ಷದ್ವೀಪದ ಒಂದು ಕ್ಷೇತ್ರದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 11 ಚುನಾವಣೆ ನಡೆಯಲಿದೆ.