ಕಾಸರಗೋಡು, ಮಾ 18 (MSP): ನ್ಯೂಜಿಲೆಂಡ್ ಕ್ರೈಸ್ಟ್ ಚರ್ಚ್ ನ ಎರಡು ಮಸೀದಿಗಳಲ್ಲಿ ಗುರುವಾರ ನಡೆದ ಶೂಟೌಟ್ ಪ್ರಕರಣದಲ್ಲಿ ಕೇರಳದ ಕೊಡಂಗಲ್ಲೂರು ತಿರುವಳ್ಳೂರು ಪೊನ್ನತ್ತ್ ನಿವಾಸಿ ಅಬ್ದುಲ್ ನಾಸರ್ ಎಂಬುವವರ ಪತ್ನಿ ಆನ್ಸಿಬಾವ(23) ಮೃತಪಟ್ಟಿದ್ದಾರೆ.
ಬಿ.ಟೆಕ್ ಪದವೀಧರೆಯಾಗಿರುವ ಅನ್ಸಿ ಉನ್ನತ ಶಿಕ್ಷಣಕ್ಕಾಗಿ ನ್ಯೂಜಿಲೆಂಡ್ ಗೆ ತೆರಳಿದ್ದರು. ಇವರು ಶಿಕ್ಷಣ ಮುಗಿಸಿ ಏಪ್ರಿಲ್ ನಲ್ಲಿ ಊರಿಗೆ ವಾಪಾಸಾಗುವವರಿದ್ದರು. 2 ವರ್ಷದ ಹಿಂದೆ ವಿವಾಹಿತರಾದ್ದ ಅವರು, ನ್ಯೂಜಿಲೆಂಡ್ ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಪತಿ ಜತೆ ವಾಸಿಸುತ್ತಿದ್ದರು. ಘಟನೆ ನಡೆದ ದಿನ ಪತಿಯೊಂದಿಗೆ ಮಸೀದಿಗೆ ಹೋಗುತ್ತಿದ್ದಾಗ ಉಗ್ರರು ದಾಳಿ ನಡೆಸಿದ್ದು, ಆನ್ಸಿ ಸ್ಥಳದಲ್ಲೇ ಮೃತಪಟ್ಟಿದ್ದರು. ಪತಿ ಅಬ್ದುಲ್ ನಾಸರ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಆನ್ಸಿಬಾವ ಅವರ ಮೃತದೇಹವನ್ನು ತವರಿಗೆ ತರುವ ಪ್ರಯತ್ನ ನಡೆಯುತ್ತಿದೆ.