ಭೋಪಾಲ್, ಮಾ 20(MSP): ಮಧ್ಯಪ್ರದೇಶದಲ್ಲಿ ನಡೆದ ಶಾಲೆಯಿಂದ ಮರಳುತ್ತಿದ್ದ 12 ವರ್ಷದ ಬಾಲಕಿಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ, ತಿರುವು ದೊರಕಿದ್ದು, ಆಕೆಯ ಮಲ ಸಹೋದರರು ಹಾಗೂ ಚಿಕ್ಕಪ್ಪನೇ ಆಕೆಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿಯ ಹತ್ಯೆ ಬಳಿಕ ಇದೇ ಕುಟುಂಬ ಇನ್ನೊಂದು ಕುಟುಂಬದ ಮೇಲೆ ಆರೋಪ ಮಾಡಿತ್ತು. ’ಛೋಟೆ ಪಟೇಲ್ ಎಂಬಾತ ನಮ್ಮ ಕುಟುಂಬದ ಹುಡುಗಿಯನ್ನು ಕೊಲೆ ಮಾಡಿರಬಹುದು. ಪಟೇಲ್ ಮತ್ತು ನಮ್ಮ ಕುಟುಂಬದ ನಡುವೆ ಆಸ್ತಿ ವಿವಾದವಿದೆ ಆರೋಪ ಮಾಡಿದ್ದರು. ಆದರೆ ಈಗ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಇಡೀ ಕುಟುಂಬನ್ನು ಬಂಧಿಸಿದ್ದಾರೆ.
ಮಧ್ಯಪ್ರದೇಶದ ಸಾಗರ ಎಂಬಲ್ಲಿ ಮಾ.14ರಂದು ಈ ಘಟನೆ ನಡೆದಿದ್ದು ಶಾಲೆಗೆ ಹೋದ ಮಗಳು ಮರಳಿ ಬಾರದೆ ಇರುವುದರಿಂದ ಕಂಗಾಲಾದ ಪೋಷಕರು ಸಾಕಷ್ಟು ಹುಡುಕಾಟ ನಡೆಸಿದ ಬಳಿಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಬಾಲಕಿ ಪರೀಕ್ಷೆ ಬರೆದು ಶಾಲೆಯಿಂದ ವಾಪಾಸ್ಸಾಗುತ್ತಿದ್ದ ವೇಳೆ 22 ವರ್ಷದ ಆಕೆಯ ಹಿರಿಯ ಮಲ ಸಹೋದರ ಚಿಕ್ಕಪ್ಪನ ಮನೆಗೆ ಕರೆದು ಕೊಂಡು ಹೋಗಿ, ಅಲ್ಲಿ ಆಕೆಯ ಮೇಲೆ ಮೊದಲು ಆತನೇ ಅತ್ಯಾಚಾರ ಎಸಗಿ ಬಳಿಕ 17 ಮತ್ತು 19 ವರ್ಷದ ಸಹೋದರರು ಹಾಗೂ 40 ವರ್ಷದ ಚಿಕ್ಕಪ್ಪ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ.
ಈ ವೇಳೆ ಬಾಲಕಿಯೂ ಅಪ್ಪ-ಅಮ್ಮನಿಗೆ ಹಾಗೂ ಪೊಲೀಸರಿಗೆ ವಿಚಾರ ತಿಳಿಸುವುದಾಗಿ ಹೇಳಿದಾಗ, ಅಲ್ಲಿಯೇ ಇದ್ದ ಆಕೆಯ ಚಿಕ್ಕಮ್ಮ, ಅತ್ಯಾಚಾರ ಎಸಗುವ ದುರುಳರನ್ನು ತಡೆಯುವ ಪ್ರಯತ್ನ ಮಾಡದೆ ಬಾಲಕಿ ಕತ್ತು ಹಿಸುಕಿ ಹತ್ಯೆ ಮಾಡಿದ್ದಾಳೆ. ಬಳಿಕ ಕ್ರೂರಿ ಕುಟುಂಬ ಸೇರಿಕೊಂಡು ಕೊಡಲಿಯಿಂದ ಆಕೆಯ ಶಿರಚ್ಚೇಧನ ಮಾಡಿ ತೋಟವೊಂದರಲ್ಲಿ ಬಿಸಾಕುತ್ತಾರೆ. ಅತ್ತ ಕಡೆ ಮಗಳನ್ನು ಕಾಣದೆ ಕಂಗಾಲದ ಪೋಷಕರು ನೀಡಿದ ದೂರಿನಂತೆ ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ರುಂಡರಹಿತ ಬಾಲಕಿಯ ದೇಹ ದೊರಕಿದೆ. ಮಾತ್ರವಲ್ಲದೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು ಶವಪರೀಕ್ಷೆಯ ವೇಳೆ ಬೆಳಕಿಗೆ ಬಂದಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದಾಗ ಪೊಲೀಸರಿಗೆ ತನಿಖೆ ಪ್ರಕರಣ ಬೆಳಕಿಗೆ ಬಂದಿದೆ.