ಲಂಡನ್, ಮಾರ್ಚ್ 20(AZM): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹುಕೋಟಿ ವಂಚನೆ ಪ್ರಕರಣದಲ್ಲಿ ಲಂಡನ್ನಲ್ಲಿ ಬಂಧನಕ್ಕೆ ಒಳಗಾಗಿದ್ದ ನೀರವ್ ಮೋದಿಯವರು ಸಲ್ಲಿಸಿದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ನೀರವ್ ಮೋದಿ ಜಾಮೀನಿಗಾಗಿ ಲಂಡನ್ ನ ವೆಸ್ಟ್ಮಿನಿಸ್ಟರ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಮಾರ್ಚ್ 29ರ ವರೆಗೆ ಬಂಧನವನ್ನು ವಿಸ್ತರಿಸಿದೆ.
ಜಾರಿ ನಿರ್ದೇಶನಾಲಯದ ದೂರಿನ ಮೇಲೆ ಲಂಡನ್ ನ್ಯಾಯಾಲಯವು ಎರಡು ದಿನಗಳ ಹಿಂದೆ ನೀರವ್ ಮೋದಿ ವಿರುದ್ಧ ವಾರೆಂಟ್ ಹೊರಡಿಸಿತ್ತು, ಅದರಂತೆ ಇಂದು ನೀರವ್ ಅವರ ಬಂಧನವಾಗಿದೆ.
ಜಾಮೀನು ಅರ್ಜಿ ಹಾಕಿದ್ದ ನೀರವ್, ನಾನು ಎಲ್ಲ ಹಣವನ್ನು ಕಟ್ಟಲು ತಯಾರಿದ್ದೇನೆ ಆದರೆ, ತನಿಖಾ ಸಂಸ್ಥೆಗಳು ಅದಕ್ಕೆ ಅವಕಾಶ ನೀಡುತ್ತಿಲ್ಲ, ನನಗೆ ಸಮಸ್ಯೆ ನೀಡಬೇಕೆಂಬ ಉದ್ದೇಶದಿಂದಲೇ ಅವರು ನನ್ನ ವಿರುದ್ಧ ಉಗ್ರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿದ್ದಾರೆ.