ನವದೆಹಲಿ,ಮಾ20(AZM): 2007ರ ಫೆಬ್ರವರಿ 18ರಂದು ನಡೆದ ಸಂಜೋತಾ ರೈಲು ಸ್ಫೋಟ ಪ್ರಕರಣದಲ್ಲಿ ಆರ್ಎಸ್ಎಸ್ನ ಮಾಜಿ ಕಾರ್ಯಕರ್ತ ಸ್ವಾಮಿ ಅಸೀಮಾನಂದ ಸೇರಿ ನಾಲ್ವರು ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ಇಂದು ಖುಲಾಸೆಗೊಳಿಸಿ, ತೀರ್ಪು ನೀಡಿದೆ.
ಅಸೀಮಾನಂದ ಸೇರಿದಂತೆ ಲೋಕೇಶ್ ಶರ್ಮಾ, ಕಮಲ್ ಚೌಹ್ಹಾಣ್ ಮತ್ತು ರಾಜೀಂದರ್ ಚೌಧರಿ ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟದ ನಾಲ್ವರು ಆರೋಪಿಗಳಾಗಿದ್ದರು. ದಾಳಿಕೋರ ಸ್ಫೋಟಕಗಳನ್ನು ಸಾಗಿಸಲು ವಾಹನ ಒದಗಿಸಿದ ಆರೋಪದ ಮೇಲೆ ದಶಕದ ಹಿಂದೆ ಅಸೀಮಾನಂದನ ಮೇಲೆ ಮೂರು ಭಯೋತ್ಪಾದಕ ದಾಳಿ ಪ್ರಕರಣಗಳ ಮೇಲೆ ಕೇಸ್ ದಾಖಲಾಗಿದ್ದವು.
2007ರ ಫೆಬ್ರವರಿ 18ರಂದು ಹರಿಯಾಣದ ಪಾಣಿಪತ್ನಲ್ಲಿ ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟಗೊಂಡಿದ್ದು, 2 ಬೋಗಿಗಳು ಸಂಪೂರ್ಣ ಸುಟ್ಟು, 68 ಮಂದಿ ಮೃತಪಟ್ಟಿದ್ದರು. . ಮೃತಪಟ್ಟವರಲ್ಲಿ ನಾಲ್ವರು ಭಾರತೀಯ ರೈಲ್ವೆ ಇಲಾಖೆ ಉದ್ಯೋಗಿಗಳು ಸೇರಿದಂತೆ ಪಾಕಿಸ್ತಾನದ ಪ್ರಜೆಗಳಾಗಿದ್ದರು.