ಬೆಂಗಳೂರು,ಮಾ21(AZM):ಲೋಕಸಭಾ ಚುನಾವಣೆಯಲ್ಲಿ ನಟ ಪ್ರಕಾಶ್ ರೈ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಶುಕ್ರವಾರದಂದು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪ್ರಕಾಶ್ ರೈಯವರಿಗೆ ಪ್ರಗತಿಪರ ಚಿಂತಕರು ಹಾಗೂ ಬೆಂಬಲಿಗರು ಜೊತೆಯಾಗಲಿದ್ದಾರೆ. ಇದಕ್ಕೂ ಮುನ್ನಾ ಪ್ರಕಾಶ್ ರೈಯವರು ತಮ್ಮನ್ನು ಬೆಂಬಲಿಸುವಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಕೋರಿದ್ದರು ಎನ್ನಲಾಗಿದೆ.
ಶಾಂತಿನಗರದ ಆಸ್ಟಿನ್ ಟೌನ್ ಬಳಿಯ ಮೈದಾನದಿಂದ ಹಡ್ಸನ್ ವೃತ್ತದವರೆಗೂ ಪ್ರಕಾಶ್ ರೈ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಲಿದ್ದು, ಬಳಿಕ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.