ಲಂಡನ್,ಮಾ 22(MSP): ಪರಿಷ್ಕೃತ ‘ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ’ (ಒಇಡಿ) ನ್ನು ಗುರುವಾರ ಬಿಡುಗಡೆ ಮಾಡಲಾಗಿದೆ. ಅಪ್ಡೇಟ್ ಮಾಡಲಾಗಿರುವ ಇಂಗ್ಲೀಷ್ ನಿಘಂಟಿನಲ್ಲಿ ಹೊಸದಾಗಿ 650 ಪದಗಳನ್ನು ಸೇರಿಸಲಾಗಿದೆ. ಈ ಎಲ್ಲಾ ಹೊಸ ಪದಗಳು ಇನ್ನು ಮುಂದೆ ಅಧಿಕೃತವಾಗಿ ಇಂಗ್ಲಿಷ್ ಪದಗಳೆಂದು ಮಾನ್ಯತೆ ನೀಡಲಾಗಿದೆ’ ಎಂದು ಡಿಕ್ಷನರಿಯ ಹಿರಿಯ ಸಹಾಯಕ ಸಂಪಾದಕ ಜೋನಾಥನ್ ಡೆಂಟ್ ಹೇಳಿದ್ದಾರೆ.
ವಿಶೇಷ ಎಂದರೆ ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿಯಲ್ಲಿ ಸೇರಿಸಲಾದ 650 ಹೊಸ ಪದಗಳಲ್ಲಿ ’ಚಡ್ಡಿ ’ ಪದವೂ ಸೇರಿಕೊಂಡಿದೆ. ಒಳ ಉಡುಪಿಗೆ ಭಾರತೀಯರು ‘ಚಡ್ಡಿ’ ಎಂದು ಕರೆಯುತ್ತಾರೆ . ಚಡ್ಡಿ ಎಂಬ ಪದ , ಭಾರತೀಯ ಇಂಗ್ಲಿಷ್ನಲ್ಲಿ ‘ಚಡ್ಡೀಸ್’ ಆಗಿದೆ. ಈ ಪದವು ನಿಘಂಟಿನಲ್ಲಿ ಸೇರಿಕೊಂಡಿದ್ದು, ಈ ಪದಕ್ಕೆ, ಚಿಕ್ಕಪ್ಯಾಂಟ್ ಆಗಿದ್ದು ಅದನ್ನು ಅಂಡರ್ವೇರ್, ಅಂಡರ್ ಪ್ಯಾಂಟ್’ ಎಂದು ಕರೆಯಲಾಗುತ್ತದೆ ಅರ್ಥ ನೀಡಲಾಗಿದೆ.