ಚಿತ್ರದುರ್ಗ,ಏ 02 (DaijiworldNews/MS): ಮರುಬಳಕೆ ರಾಕೆಟ್ ವಿಚಾರದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಹತ್ವದ ಮೈಲುಗಲ್ಲು ಸಾಧಿಸಿದೆ.RLV LEX ಎಂದು ಹೆಸರಿಸಲಾದ ಈ ಕಾರ್ಯಾಚರಣೆಯನ್ನು ರಕ್ಷಣಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (DRDO), ಮತ್ತು ಭಾರತೀಯ ವಾಯುಪಡೆ (IAF) ಸಹಯೋಗದೊಂದಿಗೆ ಭಾನುವಾರದ ಮುಂಜಾನೆ ನಡೆಸಿತು.
ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ನಲ್ಲಿ ಇಂದು ಮರುಬಳಕೆ ಮಾಡಬಹುದಾದ ವಾಹನದ ಅಟಾನಮಸ್ ಲ್ಯಾಂಡಿಂಗ್ ಮಿಷನ್ನನ್ನು ಇಂದು ಯಶಸ್ವಿಯಾಗಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
ಡಿಆರ್ಡಿಒ ಜತೆಗೂಡಿ ಈ ಟೆಸ್ಟ್ ನಡೆಸಿದ್ದು, ಭಾರತೀಯ ವಾಯುಪಡೆಯ ಚೆನೋಕ್ ಹೆಲಿಕಾಪ್ಟರ್ ಮೂಲಕ ಆರ್ಎಲ್ವಿ ಬೆಳಗ್ಗೆ ೭.೧೦ಕ್ಕೆ ಟೇಕಾಫ್ ಆಗಿತ್ತು. ಆರ್ಎಲ್ವಿ ರಿಲೀಸ್ ಯಶಸ್ವಿಯಾಗಿದ್ದು, ನಂತರ ಇಂಟಿಗ್ರೇಟೆಡ್ ನ್ಯಾವಿಗೇಷನ್, ಗೈಡೆನ್ಸ್ ಅಂಡ್ ಕಂಟ್ರೋಲ್ ಸಿಸ್ಟಮ್ ಬಳಸಿಕೊಂಡು ೭.೪೦ಕ್ಕೆ ಆಟಾನಮಸ್ ಲ್ಯಾಂಡಿಂಗ್ ಪೂರ್ಣಗೊಂಡಿದೆ ಎಂದು ಇಸ್ರೋ ಪ್ರಕಟಣೆ ತಿಳಿಸಿದೆ.