ಬೆಂಗಳೂರು, ಮಾರ್ಚ್ 22(AZM): ವರದಕ್ಷಿಣೆ ಕಿರುಕುಳಕ್ಕೆ ಮನನೊಂದ ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಸಂಗೀತಾ(38) ಎಂದು ಗುರುತಿಸಲಾಗಿದೆ. ಈಕೆ ತನ್ನ ಮನೆಯಲ್ಲೇ ಕತ್ತು ಕೊಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ತಾಯಿ ಪೊಲೀಸರಿಗೆ ಕೊಟ್ಟ ದೂರಿನ ಮೇರೆಗೆ ಪತಿ ರಾಜಶೇಖರ್, ಅತ್ತೆ ವಿಜಯ ಕುಮಾರಿ, ಹಾಗೂ ಸಹೋದರಿ ಆಕೆಯ ಸಹೋದರಿ ಜಯಲಕ್ಷ್ಮಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರು ಈಗಾಗಲೇ ತಲೆ ಮರೆಸಿಕೊಂಡಿದ್ದು, ಮೂವರ ವಿರುದ್ಧ ಪೊಲೀಸರು ತಲೆ ಬೀಸಿದ್ದಾರೆ.
ತಮಿಳುನಾಡು ಮೂಲದ ರಾಜಶೇಖರ್ ಮತ್ತು ಸಂಗೀತಾ ದಂಪತಿಗೆ ಏಳು ವರ್ಷದ ಮಗಳಿದ್ದು,ವರದಕ್ಷಿಣೆ ವಿಷಯದಲ್ಲಿ ಕೌಟುಂಬಿಕ ಕಲಹವುಂಟಾಗಿ ಇವರು ದೂರವಾಗಿದ್ದರು ಎನ್ನಲಾಗಿದೆ. ಹಾಗೂ ತನ್ನ ಮಗಳ ಜೊತೆ ತಾಯಿ ನೆಲೆಸಿದ್ದಳು.