ನವದೆಹಲಿ, ಏ 05 (DaijiworldNews/MS): ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ವಕೀಲರು ಇನ್ನು ನ್ಯಾಯಾಲಯಕ್ಕೆ ಹಾಜರಾಗುವ ಅವಶ್ಯಕತೆಯಿಲ್ಲ; ಬದಲಿಗೆ ಆನ್ಲೈನ್ ಮೂಲಕವೇ ಪ್ರಕರಣಗಳ ಬಗ್ಗೆ ವಾದ ಮಾಡಬಹುದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಹೇಳಿದ್ದಾರೆ.
ಇಂದು ಪ್ರಕರಣಗಳ ಪ್ರಸ್ತಾಪದ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ಪೀಠವು, ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಮಾಧ್ಯಮ ವರದಿ ಮಾಡಿವೆ. ಈ ಕಾರಣದಿಂದ ವಕೀಲರು ಯಾರೂ ಕೋರ್ಟ್ಗೆ ಬರುವ ಅಗತ್ಯತೆ ಇಲ್ಲ; ವರ್ಚುವಲ್ ಆಗಿ ಭಾಗವಹಿಸಬಹುದು.
ಹೈಬ್ರಿಡ್ ಮೋಡ್ ಆನ್ ಆಗಿದೆ. ಆನ್ಲೈನ್ನಲ್ಲಿ ಕಾಣಿಸಿಕೊಳ್ಳುತ್ತಿರುವ ಅನೇಕ ವಕೀಲರನ್ನು ನಾನು ನೋಡುತ್ತೇನೆ. ನೀವು ಎಲ್ಲಿದ್ದೀರಾ ಅಲ್ಲಿಂದಲೇ ಕಾರ್ಯನಿರ್ವಹಿಸಿ ಎಂದು ಅವರು ಸಲಹೆ ಮಾಡಿದ್ದಾರೆ.
ಬುಧವಾರದಂದು ದೇಶದಲ್ಲಿ 4,435 ಹೊಸ COVID-19 ಸೋಂಕುಗಳನ್ನು ದಾಖಲಾಗಿದೆ. ಇದು 5 ತಿಂಗಳುಗಳಲ್ಲಿ ಅತಿ ಹೆಚ್ಚು ಒಂದೇ ದಿನದ ಏರಿಕೆಯಾಗಿದೆ