ನವದೆಹಲಿ, ಏ 06 (DaijiworldNews/HR): ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಮುಖಂಡ ಸತ್ಯೇಂದರ್ ಜೈನ್ ಅವರು ಕಳೆದ ವರ್ಷ ಮೇ 30 ರಿಂದ ಬಂಧನದಲ್ಲಿದ್ದು, ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
ಸತ್ಯೇಂದರ್ ಜೈನ್ ಅವರೊಂದಿಗೆ ಇರುವ ಆರೋಪಿಗಳಾದ ವೈಭವ್ ಜೈನ್ ಮತ್ತು ಅಂಕುಶ್ ಜೈನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ನಿರಾಕರಿಸಿದ್ದಾರೆ.
ಇನ್ನು ಸತ್ಯೇಂದರ್ ಅವರ ಜಾಮೀನು ಅರ್ಜಿಯನ್ನು ವಿಚಾರಣಾ ನ್ಯಾಯಾಲಯವು ನವೆಂಬರ್ 17ರಂದು ವಜಾಗೊಳಿಸಿದ್ದು, ಅವರ ಜಾಮೀನು ಅರ್ಜಿಯ ಬಗ್ಗೆ ಹೈಕೋರ್ಟ್ ಕಳೆದ ವರ್ಷ ಡಿಸೆಂಬರ್ ನಲ್ಲಿ ನೋಟಿಸ್ ನೀಡಿತ್ತು. ಜಾಮೀನು ಅರ್ಜಿಯ ಆದೇಶವನ್ನು ಮಾರ್ಚ್ 22ರಂದು ಕಾಯ್ದಿರಿಸಲಾಗಿತ್ತು.
ವಿಶೇಷ ನ್ಯಾಯಾಧೀಶರು ಮತ್ತು ಜಾರಿ ನಿರ್ದೇಶನಾಲಯವು ಕೇವಲ ವಸತಿ ನಮೂದುಗಳ ಆಧಾರದ ಮೇಲೆ ಅಪರಾಧದ ಆದಾಯವನ್ನು ಗುರುತಿಸುವ ಮೂಲಕ ಮನಿ ಲಾಂಡರಿಂಗ್ ತಡೆ ಕಾಯ್ದೆಯನ್ನು ಗಂಭೀರವಾಗಿ ತಪ್ಪಾಗಿ ಅರ್ಥೈಸಿದೆ ಮತ್ತು ತಪ್ಪಾಗಿ ಬಳಸಿದೆ ಎಂದು ಸತ್ಯೇಂದರ್ ಜೈನ್ ಹೈಕೋಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದಾರೆ.