ನವದೆಹಲಿ, ಏ 06 (DaijiworldNews/HR): "ಭಾರತಕ್ಕಾಗಿ ಬಿಜೆಪಿಯು ಹಗಲಿರುಳು ದುಡಿಯುತ್ತಿದೆ ಮತ್ತು ನಮ್ಮ ಪಕ್ಷ ಮಾತೆ ಭಾರತಿಗೆ ಸಮರ್ಪಿತವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿಯ 44 ನೇ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರ ಕೊಡುಗೆಯನ್ನು ಶ್ಲಾಘಿಸಿ ಮಾತನಾಡಿದ ಅವರು, "ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳಿಂದ ಭಾರತವನ್ನು ಮುಕ್ತಗೊಳಿಸಲು ಬಿಜೆಪಿ ಸಜ್ಜಾಗಿದೆ" ಎಂದರು.
ಇನ್ನು "ಭಾರತಕ್ಕಾಗಿ ಬಿಜೆಪಿ ಹಗಲಿರುಳು ದುಡಿಯುತ್ತಿದ್ದು, ಬಿಜೆಪಿಯು ಪ್ರಜಾಪ್ರಭುತ್ವದ ಕಲ್ಪನೆಯಿಂದ ಹುಟ್ಟಿದ್ದು, ಪಕ್ಷವು ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವುದನ್ನು ಮುಂದುವರಿಸುತ್ತದೆ" ಎಂದಿದ್ದಾರೆ.
ಬಿಜೆಪಿಯು ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಕ್ರಮಗಳನ್ನು ನಂಬುತ್ತದೆ ಮತ್ತು ಕಾರ್ಯಗತಗೊಳಿಸುತ್ತದೆ ಏಕೆಂದರೆ ಅದು ಪಕ್ಷಕ್ಕೆ 'ನಂಬಿಕೆಯ ಲೇಖನ' ಎಂದು ಹೇಳಿದ್ದಾರೆ.