ಮೈಸೂರು, ಏ 07 (DaijiworldNews/HR): ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಆರ್ ಧ್ರುವನಾರಾಯಣ್ ಅವರ ಪತ್ನಿ ಶ್ರೀಮತಿ ವೀಣಾ ಆರ್ ಧ್ರುವನಾರಾಯಣ್ ರವರು ಇಂದು ವಿಧಿವಶರಾಗಿದ್ದಾರೆ.
ಆರ್. ಧ್ರುವ ನಾರಾಯಣ ಅವರು ಮಾರ್ಚ್ 11ರಂದು ನಿಧನರಾಗಿದ್ದು, ಮೊದಲೇ ಅನಾರೋಗ್ಯವನ್ನು ಎದುರಿಸುತ್ತಿದ್ದ ವೀನಾ ಅವರು ಪತಿಯ ಸಾವಿನ ಸಂದರ್ಭದಲ್ಲಿ ತುಂಬಾ ನೋವು ಅನುಭವಿಸಿದ್ದರು. ಅದಾದ ಬಳಿ ಸಾಕಷ್ಟು ಮಾನಸಿಕವಾಗಿ ಕುಗ್ಗಿ ಇಂದು ಬೆಳ್ಳಗ್ಗೆ ಸಾವನ್ನಪ್ಪಿದ್ದಾರೆ.
ಇನ್ನು ತಂದೆ ಆರ್.ಧ್ರುವನಾರಾಯಣ ಅಕಾಲಿಕ ಸಾವಿನಿಂದ ಕಂಗಾಲಾಗಿದ್ದ ನಂಜನಗೂಡು ಕಾಂಗ್ರೆಸ್ ಅಭ್ಯರ್ಥಿದರ್ಶನ್ ಮತ್ತು ಧೀರನ್ ಅವರಿಗೆ ಈಗ ತಾಯಿ ನಿಧನ ಬರಸಿಡಿಲಿನಂತೆ ಬಡಿದಿದೆ.