ಕೋಲ್ಕತ್ತಾ, ಏ 07 (DaijiworldNews/HR): ರಾಮ ನವಮಿ ಸಮಯದಲ್ಲಿ ನಡೆದ ಹಿಂಸಾಚಾರದ ಕಾರಣದಿಂದ ಪಶ್ಚಿಮ ಬಂಗಾಲದಲ್ಲಿ ಪೊಲೀಸ್ ಭದ್ರತೆಯಲ್ಲಿ ಹನುಮಂತನ ಪೂಜಿಸಲಾಗಿದ್ದು, ಹೂಗ್ಲಿಯಲ್ಲಿ ಸ್ಥಳೀಯ ಸಂಸದೆ ಲಾಕೆತ್ ಮುಖರ್ಜಿ ಅವರಿಗೆ ಹನುಮ ಜಯಂತಿ ಆಚರಣೆಯಲ್ಲಿ ಭಾಗವಹಿಸಲು ಪೊಲೀಸರು ಅವಕಾಶ ನಿರಾಕರಿಸಿದ್ದಾರೆ.
ಹೂಗ್ಲಿಯಲ್ಲಿ ಗುರುವಾರ ನಡೆದ ಹನುಮಾನ್ ಜಯಂತಿ ಶೋಭಾಯಾತ್ರೆಯಲ್ಲಿ ಭಾಗವಹಿಸದಂತೆ ಪೊಲೀಸರು ತಡೆದಿದ್ದಾರೆ ಎಂದು ಬಿಜೆಪಿ ಸಂಸದೆ ಲಾಕೆತ್ ಮುಖರ್ಜಿ ಆರೋಪಿಸಿದ್ದಾರೆ.
ಇನ್ನು ನನಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವಂತೆ ನಾನು ಅವರಿಗೆ ಹೇಳಿದೆ ಆದರೆ ಪೊಲೀಸರು ನಾನು ಹೊರಗಿನವಳು ಎಂದು ಹೇಳಿದ್ದಾರೆ. ನಾನು ಹೊರಗಿನವಳಲ್ಲ, ಇಲ್ಲಿಯ ಸಂಸದೆ. ನಾನು ಹೂಗ್ಲಿಯನ್ನು ಪ್ರತಿನಿಧಿಸುತ್ತೇನೆ. ನಾನು ಹೇಗೆ ಹೊರಗಿನವಳಾಗುತ್ತೇನೆ? ನಾನು ರಾಜ್ಯಪಾಲರೊಂದಿಗೆ ಮಾತನಾಡಿದ್ದೇನೆ ಎಂದರು.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಸೋಮವಾರ ಕಲ್ಲು ತೂರಾಟ ವರದಿಯಾದ ಬಳಿಕ ರಿಶ್ರಾ ರೈಲು ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ಸ್ಥಳೀಯ ಮತ್ತು ಮೇಲ್ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.