ನವದೆಹಲಿ, ಮಾ 23(MSP): ಜೆಟ್ ಏರ್ ವೇಸ್ ವಿಮಾನಯಾನ ಸಂಸ್ಥೆಯಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದ್ದು ಈ ಹಿನ್ನಲೆಯಲ್ಲಿ ಜೆಟ್ ವೇರ್ ವೇಸ್ ಏಪ್ರಿಲ್ ಅಂತ್ಯದವರೆಗೆ ಮತ್ತೆ 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿನ ಸೇವೆಯನ್ನು ಸ್ಥಗಿತಗೊಳಿಸಿದೆ.
ಏರ್ ಲೈನ್ಸ್ ಮೂಲಗಳ ಪ್ರಕಾರ ಪುಣೆ-ಸಿಂಗಾಪುರ,ಪುಣೆ-ಅಬುದಾಬಿ, ಮುಂಬೈ-ಮ್ಯಾಂಚೆಸ್ಟರ್ ಸೇರಿದಂತೆ ಒಟ್ಟು 13 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿನ ಜೆಟ್ ಏರ್ ವೇಸ್ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಒಟ್ಟಾರೆ ಈಗಾಗಲೇ ಸ್ಥಗಿತಗೊಂಡ ವಿಮಾನಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ.
ಬಾಡಿಗೆ ಹಣ ಪಾವತಿ ಮಾಡಲು ಸಾಧ್ಯವಾಗದ ಕಾರಣ 7 ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದ್ದು, ಪ್ರಸ್ತುತ ದೇಶೀಯ ಮತ್ತು ಅಂತಾರಾಷ್ಟ್ರೀಯ 119 ಮಾರ್ಗಗಳಲ್ಲಿ ಮಾತ್ರ ದಿನಂಪ್ರತಿ ವಿಮಾನಗಳು ಸಂಚರಿಸುತ್ತಿವೆ. ಈ ಹಿಂದೆ ಇದರ 600 ಮಾರ್ಗಗಳನ್ನು ಹೊಂದಿತ್ತು.