ಸುಕ್ಮಾ, ಏ 8(DaijiworldNews/HR): ಇಬ್ಬರು ನಕ್ಸಲೀಯರನ್ನು ಬಂಧಿಸಿ ಅವರಿಂದ ಸ್ಪೋಟಕಗಳನ್ನು ವಶಪಡಿಸಿಕೊಂಡಿರುವ ಘಟನೆ ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಮುಚಕ್ ಸುಖರಾಮ್ (28) ಮತ್ತು ಮದ್ವಿ ಕೋಸಾ (30) ಎಂದು ಗುರುತಿಸಲಾಗಿದೆ.
ಈ ಇಬ್ಬರ ಪತ್ತೆಗೆ ಮಾಹಿತಿ ನೀಡಿದವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಆರೋಪಿಗಳು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿ ಸ್ಪೋಟ ನಡೆಸಲು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ಇನ್ನು ಸುಖರಾಮ್ ಸ್ಥಳೀಯ ಸಂಸ್ಥೆ ಸ್ಕ್ವಾಡ್ನಲ್ಲಿ ಸಕ್ರಿಯರಾಗಿದ್ದರೆ, ಕೋಸಾ ಮಿಲಿಟರಿ ಕಮಾಂಡರ್ ಆಗಿದ್ದು, ಸುಮಾರು 10 ಕೆ.ಜಿ. ತೂಕದ ಟಿಫಿನ್ ಬಾಂಬ್, 12 ಡಿಟೋನೇಟರ್ಗಳು, ಸೋಟಕಕ್ಕೆ ಬಳಸುವ ಅಮೋನಿಯಂ ನೈಟ್ರೇಟ್ 60 ಕೆಜಿ, ಸ್ವಿಚ್ಗಳು, ಫೈರ್ ಕ್ರ್ಯಾಕರ್ ಸೇರಿದಂತೆ ಇನ್ನಿತರ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.