ನವದೆಹಲಿ,ಮಾ 23(MSP): ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕರಮ್ ಬೀರ್ ಸಿಂಗ್ ಅವರು ನೇಮಕವಾಗಲಿದ್ದಾರೆ.
ಈ ಬಗ್ಗೆ ಸರ್ಕಾರದ ಅಧಿಕೃತ ಮೂಲಗಳಿಂದ ತಿಳಿದುಬಂದಿದ್ದು, ಪ್ರಸ್ತುತ ನೌಕಾಪಡೆಯ ಮುಖ್ಯಸ್ಥರಾಗಿರುವ ಸುನೀಲ್ ಲಾಂಬಾ ಅವರ ಅಧಿಕಾರಾವಧಿ ಮೇ 31 ಮುಗಿಯಲಿದೆ. ಈ ಹಿನ್ನಲೆಯಲ್ಲಿ ಅವರ ಸ್ಥಾನಕ್ಕೆ ಕರಮ್ ಬೀರ್ ಸಿಂಗ್ ನೇಮಕವಾಗಲಿದ್ದಾರೆ. ಇವರು 36 ವರ್ಷ ಸೇವಾನುಭವ ಹೊಂದಿದ್ದಾರೆ.
ಕರಮ್ ಬೀರ್ ಸಿಂಗ್ 1980 ರಲ್ಲಿ ನೌಕಪಡೆಗೆ ಸೇರಿದ್ದು ಮಹಾರಾಷ್ಟ್ರದ ಖಡಕ್ವಾಸ್ಲಾ ದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್ಡಿಎ) ಹಳೆವಿದ್ಯಾರ್ಥಿಯಾಗಿದ್ದಾರೆ. ಇವರು ಕ್ಷಿಪಣಿ ಉಡಾವಣೆಯಲ್ಲಿ ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಪ್ರಸ್ತುತ ಇವರು ಪೂರ್ವ ನೇವಲ್ ಕಮಾಂಡ್ ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.