ಬೆಂಗಳೂರು,ಮಾ.23(AZM): ಖ್ಯಾತ ಸಾಹಿತಿ, ನಿತ್ಯೋತ್ಸವ ಕವಿ ಡಾ.ನಿಸಾರ್ ಅಹ್ಮದ್ ಅವರ ಪತ್ನಿ ಶಾನವಾಝ್ ಬೇಗಮ್(77) ಶನಿವಾರದಂದು ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾನವಾಝ್ ಬೇಗಮ್ ಅವರು ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಶಾನಾವಾಝ್ ಬೇಗಮ್ ಅವರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ದೂರದರ್ಶನ ಕೇಂದ್ರದ ಬಳಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.